ವಿದ್ಯಾರ್ಥಿಗಳ ಸಾಧನೆ ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡುವ ಕಾಯಕದಲ್ಲಿ ಬೆಳಕುಗ್ರಾಮೀಣಾಭಿವೃದ್ಧಿ ಟ್ರಸ್ಟ್ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಅಲ್ಲದೆ, ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಮಾತ್ರ ವಹಿಸುವ ಶಿಕ್ಷಕರನ್ನೂ ಗೌರವಿಸಿ, ಸನ್ಮಾನಿಸುತ್ತಿರುವುದು ಸಾರ್ವಜನಿಕ ವಲಯಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮ ಪಂಚಾಯತ ವ್ಯಾಪತಿಯ ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಕುಮಟಾ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಉದ್ಘಾಟನೆಯನ್ನು ನಿವೃತ ಡಿ.ಎಪ್.ಓ ಹಾಗೂ ಬೆಳಕು ಗ್ರಾಮೀಣಾಭಿವೃದ್ದಿ ಟ್ರಸ್ಟನ ಅಧ್ಯಕ್ಷರಾದ ನಾಗರಾಜ ನಾಯಕ ನೆರವೇರಿಸಿದರು. ನಂತರ ಮಾತನಾಡಿ ಮಕ್ಕಳಿಗೆ ಯಾಕೆ ಸನ್ಮಾನ ಮಾಡುತಿದ್ದೇವೆ ಎನ್ನುವುದನ್ನು ಸವಿಸ್ತಾರವಾಗಿ ವಿವರಿಸಿದರು. ಹಾಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು.. ಹೀಗಾಗಿ ಪ್ರಾದ್ಯಾಪಕರನ್ನೂ ಸನ್ಮಾನಿಸುತ್ತಿದ್ದೇವೆ ಎಂದರು. ಅದ್ಯಕ್ಷತೆವಹಿಸಿದ ಮುಗ್ವಾ ಗ್ರಾಮ ಪಂಚಾಯತ ಅದ್ಯಕ್ಷರಾದ ಟಿ ಎಸ್ ಹೆಗಡೆ ಮಾತನಾಡಿ ನಾಗರಾಜ ನಾಯಕ ತೂರ್ಕೆಯವರ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು.
ಈ ಸಂದರ್ಬದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕುಮಾರಿ ಸುಚಿತ್ರಾ ರಾಮಚಂದ್ರ ಭಟ್ಟ, ಕುಮಾರಿ ಕವನ ತಿಮ್ಮಣ ಹೆಗಡೆ, ಭವ್ಯಾ ಮಂಜುನಾಥ ಮಡಿವಾಳ, ನಾಗರತ್ನ ಮಾಸ್ತಿ ಗೌಡ, ಇವರನ್ನು ಪುರಸ್ಕರಿಸಲಾಯಿತು, ಹಾಗೂ ಶಿಕ್ಷಕರುಗಳನ್ನು ಆದರದಿಂದ ಸನ್ಮಾನಿಸಲಾಯಿತು
ಈ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ವೆಂಕಟ್ರಮಣ ಹೆಗಡೆ, ಮುಗ್ವಾ ಗ್ರಾಮ ಪಂಚಾಯತ ಸದಸ್ಯೆ ಮೀರಾ ಪ್ರಭಾಕರ ನಾಯ್ಕ, ಎಸ್ ಆರ್ ಹೆಗಡೆ, ನಾರಾಯಣ ಹೆಗಡೆ, ಎಮ್ ಎಸ್ ಹೆಗಡೆ ಕಣ್ಣಿ, ಎಸ್ ಜಿ ಹೆಗಡೆ, ರೋಷನ್ ಶಾನಭಾಗ, ಮುಂತಾದವರು ಇದ್ದರು,