ಸಿದ್ದಾಪುರ : ಉತ್ತರಕನ್ನಡದ ಬೇರೆ ಬೇರೆ ಸ್ಥಳಗಳಿಂದ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತದ ಸುದ್ದಿಗಳು ವರದಿಯಾಗುತ್ತಿದೆ. ಇಂದು ತಾಲೂಕಿನ ಜಾಗನಳ್ಳಿ ಬಳಿ ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಓಮನಿ, ಸ್ವಿಪ್ಟ್ ಹಾಗೂ ಮಾರುತಿ 800 ಕಾರ್ ಸಂಪೂರ್ಣ ಜಖಂ ಆಗಿದೆ.

RELATED ARTICLES  ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕುಮಾರ ನಾಯ್ಕ ಭಟ್ಕಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಆಚಾರ್ಯ ಶಿರಸಿ ಅವರಿಗೆ ಸನ್ಮಾನ

ಓವರ್ ಟೇಕ್ ಬರದಲ್ಲಿ ಸ್ವಿಪ್ಟ್ ಕಾರ್ ಉಳಿದೆರಡು ಕಾರ್ ಗಳಿಗೆ ಗುದ್ದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಸ್ವಿಪ್ಟ್ ಕಾರ್ ನವರು ಓವರ್ಟೇಕ್ ಮಾಡುವ ಭರದಲ್ಲಿ ಉಳಿದೆರಡು ಕಾರ್ ಗಳಿಗೆ ಗುದ್ದಿದ್ದಾರೆ ಎನ್ನಲಾಗಿದೆ. ಈ ಕಾರು ಮಂಗಳೂರು ಮೂಲದವರು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಉಳಿದೆರಡು ಕಾರ್ ರಸ್ತೆಯಿಂದ ಹೊರಗೆ ಹೋಗಿ ಬಿದ್ದಿವೆ. ಅದೃಷ್ಟವಶಾತ್ ಚಿಕ್ಕಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಬಚಾವಾಗಿದ್ದಾರೆ. ತಕ್ಷಣ ಚಿಕಿತ್ಸೆಗೆ ಶಿರಸಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಘಟನೆ ಬಗ್ಗೆ ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.

RELATED ARTICLES  ಕಾಂಗ್ರೆಸ್ ಅಭ್ಯರ್ಥಿ ಶಾರದಾ ಶೆಟ್ಟಿ ಸೋಲಿನ ಕುರಿತು ಆತ್ಮಾವಲೋಕನಾ ಸಭೆ