ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆಯಲ್ಲಿ ನಡೆದ ಕೊಡುಗೆ ಸ್ವೀಕಾರ ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಸಂಸ್ಥೆ, ಮಂಗಳೂರು ಇದರ ನಿರ್ದೇಶಕರಾದ ಶ್ರೀ ಶಂಭುಲಿಂಗ ಹೆಗಡೆ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಶ್ರೀಯುತರು ಗ್ರಾಮೀಣ ಭಾಗದ ಶಾಲೆಯಲ್ಲಿ ಶಿಕ್ಷಕರ ಮತ್ತು ಪಾಲಕರ ಸಹಭಾಗಿತ್ವದಲ್ಲಿ ಶಾಲೆಯು ಅಭಿವೃದ್ಧಿಪಥದತ್ತ ದಾಪುಗಾಲಿಡುತ್ತಿರುವದು ಶ್ಲಾಘನೀಯ. ಜೊತೆಗೆ ನಾವು ನಮ್ಮ ಸಂಸ್ಥೆಯ ವತಿಯಿಂದ ನೀಡುತ್ತಿರುವ ಕೊಡುಗೆಯಾದ ಸ್ಮಾರ್ಟ್ ಟಿವಿಯು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣವನ್ನು ಪಡೆಯುವಲ್ಲಿ ಅನುಕೂಲವಾಗಲಿ ಎಂದು ಶುಭ ಹಾರೈಸಿದರು.

RELATED ARTICLES  ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ ಜಾಲಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು

ನಂತರ ಆನ್ಲೈನ್ನಲ್ಲಿ ಹಾಜರಿದ್ದ ವಿದ್ಯಾರ್ಥಿಗಳೊಂದಿಗೆ ಮತ್ತು ಕೃಷಿಕ ಪಾಲಕರೊಂದಿಗೆ ಸಂವಾದ ನಡೆಸಿದರು. ನಂತರ ಮಾತನಾಡಿದ ಕ್ಯಾಂಪ್ಕೋ ಸಂಸ್ಥೆಯ ಶ್ರೀ ಭರತ್ ಹೆಗಡೆ ಶಿರಸಿ, ಇವರು ಕೃಷಿಕರಿಗೆ ಸಂಸ್ಥೆಯ ವತಿಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಕ್ಯಾಂಪ್ಕೋ ಸಂಸ್ಥೆಯ ಶ್ರೀ ಸುನಿಲ್ ಕುಮಾರ್ ಹೊನ್ನಾವರ, ಶ್ರೀ ಮಂಜುನಾಥ ಗೌಡ, ಗ್ರಾಮ ಪಂಚಾಯತ್ ಸದಸ್ಯರು, ಉಪ್ಪೋಣಿ, ಶ್ರೀ ಕೇಶವ್ ಗೌಡ ಎಸ್ಡಿಎಂಸಿ ಅಧ್ಯಕ್ಷರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಸದಸ್ಯರು, ಪಾಲಕ-ಪೋಷಕರು, ಗ್ರಾಮಸ್ಥರು, ಪೂರ್ವ ವಿದ್ಯಾರ್ಥಿಗಳು, ಕೃಷಿಕರು ಹಾಜರಿದ್ದರು.

RELATED ARTICLES  ಭಟ್ಕಳದಲ್ಲಿ ಮತ್ತೆ ಕೋರೋನಾ +Ve : ಜನತೆ ಮತ್ತೆ ಭಯದ ಗೂಡಿಗೆ…!