ಕುಮಟಾ: ಚಂದ್ರಕಾಂತ ಪಡುವಣಿ ಪರಂಪರೆಯನ್ನು ಪ್ರೀತಿಸುವ ಬರಹಗಾರ. ಜೊತೆಗೆ ಅವರು ವಿಷಯಗಳನ್ನು ಖಚಿತವಾಗಿ, ನಿರ್ದಿಷ್ಟವಾಗಿ ಹೇಳುವಾಗ ವಸ್ತುನಿಷ್ಠತೆಯನ್ನು ಕಾಯ್ದುಕೊಂಡು ನಿರ್ಲಿಪ್ತತೆಯನ್ನು ಉಳಿಸಿಕೊಳ್ಳುವುದರೊಂದಿಗೆ ತೌಲನಿಕ ವಿಶ್ಲೇಷಣಾ ಸಮರ್ಥ್ಯಗಳಿಗೆ ಸಾಕ್ಷಿಯಾಗುತ್ತಾರೆ. ಈ ಕಾರಣಕ್ಕಾಗಿಯೇ ಅವರ ಕೃತಿಗಳು ಗೆಲ್ಲುತ್ತವೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅಭಿಪ್ರಾಯ ಪಟ್ಟರು.


ಅವರು ಇಲ್ಲಿಯ ಗ್ರಾಮ ಒಕ್ಕಲಿಗ ಸಮುದಾಯ ಭವನದಲ್ಲಿ ಸ್ಥಳೀಯ ಉತ್ತರ ಕನ್ನಡ ಜಿಲ್ಲಾ ಗ್ರಾಮ ಒಕ್ಕಲಿಗ ಸಮುದಾಯ ಭವನ ಸಮಿತಿ ಮತ್ತು ಪಡುವಣಿಯ ಹೊನ್ನಮ್ಮ ಪ್ರಕಾಶನದ ಸಹಯೋಗದಲ್ಲಿ ಶಿಕ್ಷಕ, ಲೇಖಕ ಚಂದ್ರಶೇಖರ ಪಡುವಣಿ ಅವರ ‘ಬಲೆಯೊಳಗಿನ ಬದುಕು’ ಮತ್ತು ‘ಸಾಂಸ್ಕೃತಿಕ ತಲ್ಲಣ’ ಈ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದದರು.

ಬಿಡುಗಡೆ ಅಂದ ಮಾತ್ರಕ್ಕೆ ಕೇವಲ ಪುಸ್ತಕ ಮಾತ್ರ ಅಲ್ಲ, ಇಲ್ಲಿ ಬರಹಗಾರ ಕೂಡ ಬಿಡುಗಡೆಯಾಗುತ್ತಾನೆ. ಜೊತೆ ಜೊಗೆಗೇ ನಾವೆಲ್ಲರೂ ಈ ಸಂದರ್ಭದ ನೆಪದಲ್ಲಿ ನಮ್ಮೊಳಗಿನ ಬಿಗಿ ಬಂಧನದಿಂದ ಬಿಡುಗಡೆಗೊಳ್ಳುತ್ತೇವೆ. ಅಕ್ಷರಗಳಿಗೆ, ಪುಸ್ತಕಕ್ಕೆ, ಸಾಹಿತ್ಯಕ್ಕೆ ಅಂಥ ದೊಡ್ಡ ಶಕ್ತಿ ಇದೆ ಎಂದು ಅರವಿಂದ ಕರ್ಕಿಕೋಡಿ ಹೇಳಿದರು.

RELATED ARTICLES  ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಸೈನಿಕರುಗಳಿಗೆ ಮತ್ತು ರೈತರುಗಳಿಗೆ ಗೌರವ ಸಮರ್ಪಣೆ

ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಮಿರ್ಜಾನದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮಿಜಿ ಅವರು ಸನ್ಯಾಸಿ ಮತ್ತು ಸಾಹಿತಿ ಇಬ್ಬರೂ ಸಮಾಜಮುಖಿ ಚಿಂತನೆ ಮಾಡುತ್ತಾರೆ. ಆದರೆ ಸನ್ಯಾಸಿ ಸಂಸಾರಿಯಾಗಿರಲ್ಲ. ಸಾಹಿತಿ ಸಂಸಾರಿಯಾಗಿರುತ್ತಾನೆ. ಇಲ್ಲಿ ಚಂದ್ರಕಾAತ ಪಡುವಣಿ ಸಮಾಜಮುಖಿ ಚಿಂತನೆ ಮಾಡಿದ್ದಾರೆ ಎಂದು ಆಶೀರ್ವಚನದಲ್ಲಿ ಹೇಳಿದರು. ‘ಬಲೆಯೊಳಗಿನ ಬದುಕು’ಕೃತಿಯನ್ನು ಶಿರಸಿ ಶೈಕ್ಷಣಿಕ ಕೇಂದ್ರದ ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ವೆಂಕಟೇಶ ಪಟಗಾರ, ‘ಸಾಂಸ್ಕೃತಿಕ ತಲ್ಲಣ’ ಕೃತಿಯನ್ನು ಶಂಭು ನಾರಾಯಣ ಹೆಗಡೆ ಬಿಡುಗಡೆ ಗೊಳಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಸಾಹಿತಿ ಪಿ.ಆರ್.ನಾಯ್ಕ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಗಾಂವಕರ, ಗ್ರಾಮ ಒಕ್ಕಲಿಗ ಸಮುದಾಯ ಭವನ ಸಮಿತಿಯ ಅಧ್ಯಕ್ಷ ಮಂಜುನಾಥ ಗಣೇಶ ಪಟಗಾರ, ಜಿಲ್ಲಾ ಒಕ್ಕಲಿಗ ಯುವ ಬಳಗದ ಅಧ್ಯಕ್ಷ ವಿನಾಯಕಮ ಪಟಗಾರ ಸಹಕಾರಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಮಧುಕರ ಪಟಗಾರ ಪಡುವಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ ಪಾಲ್ಗೊಂಡಿದ್ದರು.
ಕುಮಟಾ ತಾಲೂಕು ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ ಶ್ರೀಧರ ಉಪ್ಪಿನಗಣಪತಿ, ಅಧ್ಯಾಪಕ ವಿಷ್ಣು ಪಟಗಾರ ಕೃತಿ ಪರಿಚಯಿಸಿದರು. ಲೇಖಕ ಚಂದ್ರಶೇಖರ ಪಡುವಣಿ ಅವರು ಧನ್ಯವಾದ ಅರ್ಪಿಸಿದರು.

RELATED ARTICLES  ಸೈಕಲ್ ಮೇಲೆ ಹೋಗುತ್ತಿದ್ದವನಿಗೆ ಬಡಿದ ಲಾರಿ : ಕುಮಟಾದಲ್ಲಿ ಓರ್ವನ ಸಾವು

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಸುಮುಖಾನಂದ ಜಲವಳ್ಳಿ ಮತ್ತು ನಾರಾಯಣ ಕೆ. ಹೆಗಡೆ ಅವರನ್ನು ಸನ್ಮಾನಿಸಲಾಯಿತು.ಜಿ.ಪಂ. ಮಾಜಿ ಸದಸ್ಯ ಕೃಷ್ಣ ಗೌಡ, ಇಡಗುಂಜಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹೊಸಬಯ್ಯ ಪಟಗಾರ ಪಡುವಣಿ, ಕ್ಯಾರಿಯರ್ ಅಕಾಡೆಮಿಯ ಆರ್.ಎನ್.ಪಟಗಾರ ವೇದಿಕಯಲ್ಲಿ ಉಪಸ್ಥಿತರಿದ್ದರು.