ಕುಮಟಾ: ವಾಹನ ಚಲಾಯಿಸುವಾಗ ವಾಹನ ಸವಾರರು ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೇ ನಾಯಿಗಳು ಹಾಗೂ ಆಕಳುಗಳು ಅಡ್ಡ ಬಂದು ಅಪಘಾತ ಸಂಭವಿಸುವ ಘಟನೆ ಆಗಾಗ ವರದಿಯಾಗುತ್ತಿದ್ದು, ಇಂತಹುದೇ ಘಟನೆ ವರದಿಯಾಗಿದೆ. ತಾಲೂಕಿನ ಮಿರ್ಜಾನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಬಂದ ಆಕಳನ್ನು ತಪ್ಪಿಸಲು ಹೋಗಿ ಕಾರೊಂದು ನಡುರಸ್ತೆಯಲ್ಲೇ ಪಲ್ಟಿಯಾದ ಘಟನೆ ಸಂಭವಿಸಿದೆ.

ವೇಗವಾಗಿ ಚಲಿಸುತ್ತಿದ್ದ ಕಾರಿಗೆನ ಸನಿಹಕ್ಕೆ ಏಕಾಏಕಿ ರಸ್ತೆಯಲ್ಲಿ ಆಕಳು ಅಡ್ಡ ಬಂದಿದೆ. ಹೀಗಾಗಿ ಆಕಳನ್ನು ಉಳಿಸಲು ಚಾಲಕ ದಿಢೀರ್ ಆಗಿ ಬ್ರೇಕ್ ಹಾಕಿದ್ದು, ಕಾರು ನಿಯಂತ್ರಣ ತಪ್ಪಿ, ಪಲ್ಟಿಯಾಗಿರುವ ಘಟನೆ ನಡೆದಿದೆ. ಘಟನೆಯಲ್ಲಿ ಐವರಿಗೆ ಗಾಯಗಳಾದ ಬಗ್ಗೆ ವರದಿಯಾಗಿದೆ.

RELATED ARTICLES  ಹನೆಹಳ್ಳಿ ಗ್ರಾಮದ ಗ್ರಾಮೀಣ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಹವಾನಿಯಂತ್ರಿತ ಕಟ್ಟಡ ಉದ್ಘಾಟನೆ.

ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಬಾಣಾವಾರದ ನಿವಾಸಿ ಕೃಷ್ಣಮೂರ್ತಿ ಬಿ. ಆರ್, ವಿನಯ್ ಕಸ್ತೂರಪ್ಪ, ರಘು ಬಿ. ಆರ್, ಸುಜ ಗಂಗಾಧರ ಹಾಗೂ ಚಾಲಕ ಕಲ್ಲೇಶ ಕಾಂತರಾಜು ಗಾಯಗೊಂಡವರು ಎನ್ನಲಾಗಿದ್ದು, ಇವರಿದ್ದ ಕಾರು ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ತೆರಳುತ್ತಿರುವಾಗ ಈ ಘಟನೆ ನಡೆದಿದೆ.

RELATED ARTICLES  ಮೀನುಗಾರಿಕೆ ಉದ್ಯಮದಲ್ಲಿ ವೈವೀಧ್ಯೀಕರಣ ಕಾರ್ಯಾಗಾರ ಸಂಪನ್ನ.

ದುರ್ಘಟನೆಯಲ್ಲಿ ಗಾಯಗೊಂಡವರನ್ನು 108 ಅಂಬ್ಯುಲೆನ್ಸ್ ಮೂಲಕ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ವರದಿ ನಂತರ ಪರಿಪೂರ್ಣ ಮಾಹಿತಿ ಸಿಗಲಿದೆ.