ಕುಮಟಾ: ತಾಲೂಕಿನ ಹೊಲನಗದ್ದೆ ಬಳಿ ನಿನ್ನೆ ರಾತ್ರಿ ಸರಿ ಸುಮಾರು 8 ಗಂಟೆಗೆ ಕಲ್ಲು ತುಂಬಿದ ಲಾರಿಯೊಂದು ಅಪಘಾತವಾಗಿದ್ದು, ಸಾರ್ವಜನಿಕರು ತಕ್ಷಣವೇ ಕುಮಟಾ ಅಗ್ನಿಶಾಮಕ ಠಾಣೆಗೆ ಕರೆಮಾಡಿದ್ದು, ಕರೆಗೆ ಸ್ಪಂದಿಸಿ ಶೀಘ್ರವೇ ಸ್ಥಳಕ್ಕಾಗಮಿಸಿದ ಅಘ್ನಿಶಾಮಕ ಸಿಬ್ಬಂದಿಗಳು ಕ್ರೆನ್‌ನ ಮೂಲಕ ಪಲ್ಟಿಯಾಗಿದ್ದ ಲಾರಿಯನ್ನು ಮೆಲೆತ್ತಿ, ಲಾರಿಯ ಕ್ಲೀನರ್‌ನ್ನು ರಕ್ಷಿಸಿದ ಘಟನೆ ನಡೆದಿದೆ.
ಕಲ್ಲು ತುಂಬಿದ ಲಾರಿಯೊಂದು ದನಕ್ಕೆ ಡಿಕ್ಕಿ ಹೊಡೆದು, ನಂತರ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದಂತಹ ತೋಟದಲ್ಲಿ ಪಲ್ಟಿಯಾಗಿದೆ. ಚಲಿಸುತ್ತಿದ್ದಂತಹ ಕಲ್ಲು ತುಂಬಿದ ಲಾರಿಗೆ ದನ ಅಡ್ಡಬಂದ ಪರಿಣಾಮ ಲಾರಿಯು ದನಕ್ಕೆ ದಿಕ್ಕಿ ಹೊಡೆದಿದೆ. ನಂತರ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೋಟದಲ್ಲಿದ್ದ ಕಂದಕ್ಕೆ ಉರುಳಿ ಲಾರಿಯ ಕ್ಲೀನರ್ ಆಚೆ ಬರಲಾಗದೆ ಒದ್ದಾಡುತ್ತಿದ್ದ ಎನ್ನಲಾಗಿದೆ.
ಸಾರ್ವಜನಿಕರ ಕರೆಯ ಮೇರೆಗೆ ಬಂದ ಕುಮಟಾ ಅಘ್ನಿಶಾಮಕ ಠಾಣಾಧಿಕಾರಿ ತಮ್ಮಯ್ಯ ಗೊಂಡ, ಸಿಬ್ಬಂದಿಗಳಾದ ಲಂಬೋದರ ಪಟಗಾರ, ಜಯಂತ ನಾಯ್ಕ, ನಾಗರಾಜ ಪಟಗಾರ, ರಾಜೇಶ ಮಡಿವಾಳ, ಮಹಾಬಲೇಶ್ವರ ಹರಿಕಂತ್ರ, ಗುರುನಾಥ ನಾಯ್ಕ, ದಿನೇಶ ಕುಮಾರ್ ಮುಂತಾದವರು ಲಾರಿಯ ಚಾಲಕ ಹಾಗೂ ಕ್ಲೀನರ್ ನನ್ನು ರಕ್ಷಿಸಿದ್ದಾರೆ. ಲಾರಿ ಚಾಲಕ ಹಾಗೂ ಕ್ಲೀನರ್‌ಗೆ ಕೆಲ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.