ಬೆಂಗಳೂರು: ಅಭಯಾಕ್ಷರ ಎಂಬುದು ಗೋವಿನ ಪರವಾಗಿ ನಡೆಯುತ್ತಿರುವ ಅಕ್ಷರ ಸಂಗ್ರಾಮ, ಗೋವಿನ ಪ್ರಾನ ರಕ್ಷಣೆಗೆ ಅಭಯಾಕ್ಷರದ ಮೂಲಕ ಹಕ್ಕೊತ್ತಾಯ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಅಭಯಾಕ್ಷರ ಕೊಡಿ ಮತ್ತು ಇನ್ನೊಬ್ಬರಿಂದ ಕೊಡಿಸಿ ಎಂದರು. ಅವರು ಬೆಂಗಳೂರಿನ ಯಲಹಂಕಾದಲ್ಲಿ ನಡೆಯುತ್ತಿರುವ ಅಭಯಾಕ್ಷರ ಅಭಿಯಾನ ಹಾಗೂ ಹಾಲು ಹಬ್ಬದಲ್ಲಿ ಆಶೀರ್ವಚನ ನೀಡಿದರು.
ಗೋವುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಗೋವುಗಳ ಉಳಿವಿಗೆ ಹಾಗೂ ದೇಶೀ ತಳಿಗಳ ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಈಗ ನಡೆಯುತ್ತಿರುವ ಅಭಯಾಕ್ಷರ ಗೋ ರಕ್ಷಣೆಯ ಹಕ್ಕೊತ್ತಾಯವಾದರೆ ಇನ್ನು ಕೆಲವೇ ದಿನಗಳಲ್ಲಿ ಗೋವಿನ ಉಳಿವಿಗೆ ಬ್ರಹತ್ ಕಾರ್ಯವೊಂದು ನಡೆಯುವುದಿದೆ. ಗೋವಿನ ಬಗ್ಗೆ ಅತೀ ಕಾಳಜಿ ಹೊಂದಿರುವವ ಜನರು ಬೇಕು. ಸಮಾಜ ಈಗ ಎಚ್ಚರಗೊಳ್ಳಬೇಕು ಸಮಾಜ ಹಾಲಿನ ರೂಪದಲ್ಲಿ ವಿಷವನ್ನು ಕುಡಿಯುತ್ತಿದ್ದಾರೆ. ನಿಜವಾದ ಹಾಲು ಹಾಲೆಂಬ ಅಮೃತವನ್ನು ಉಣಬಡಿಸಬೇಕು ಎಂಬುದಕ್ಕೆ ಈ ಎಲ್ಲ ಕಾರ್ಯಗಳೂ ನಡೆಯುತ್ತಿದೆ. ಎಲ್ಲರೂ ಸೇನೆಗೆ ಸೇರಬೇಕು ಸಂದೀಪ ಉನ್ನಿಕೃಷ್ಣನ್ ನಂತೆಯೇ ಅಥವಾ ಇತರ ಸೇನಾನಿಗಳಂತೆ ಗಡಿ ಕಾ ಸೇನೆ ಸೇರಲು ಆಗದಿದ್ದರೆ ಅಕ್ಷರಸೇನೆಗೆ ಸೇರಿ ಎಂದು ಶ್ರೀಗಳು ಹೇಳಿದರು. ಇದೇ ಸಂದರ್ಭದಲ್ಲಿ ಸಂಗ್ರಹಿಸಿದ 66 ಸಾವಿರ ಆಭಯಾಕ್ಷರಗಳನ್ನು ಶ್ರೀಗಳಿಗೆ ಸಮರ್ಪಿಸಲಾಯಿತು.
ಚಂದನ ವಾಹಿನಿಯ ಥಟ್ ಅಂತಾ ಹೇಳಿ ಕಾರ್ಯಕ್ರಮದ ನಿರೂಪಕರು ಡಾ. ನಾ ಸೋಮೇಶ್ವರ ಕವನದ ಮೂಲಕ ಗೋವಿನ ಸಂದೇಶ ನೀಡಿದರು. ಗೋವಿರೆ ಗೋಕುಲ ಇಲ್ಲದಿದ್ದರೆ ವ್ಯಾಕುಲ ಎಂಬುದಾಗಿ ಅಭಯಾಕ್ಷರಕ್ಕೆ ಸಹಿ ನೀಡಿದರು. ಹಿರೇ ಹಡಗಲಿ ಅಭಿನವ ಹಾಲವೀರಪ್ಪಜ್ಜ ಮಹಾ ಸ್ವಾಮಿಗಳು ಹಾಲೇಶ್ವರ ಮಠ ಇವರು ಗೋ ಸಂದೇಶ ನೀಡುತ್ತಾ ಗೋವು ಮಾನವನ ಜೀವನದ ಉಸಿರಾಗಬೇಕು. ರಾಜ್ಯದಲ್ಲಿ ಲಕ್ಷ ಲಕ್ಷ ಅಭಯಾಕ್ಷರ ಸಂಗ್ರಹವಾಗಿದೆ . ಯಾವುದೋ ಸಾವಿರಾರು ಪುರುಷರು ಸೇರಿದರೂ ಮಾಡಲಾಗದ ಈ ಕಾರ್ಯವನ್ನು ರಾಮಚಂದ್ರಾಪುರ ಮಠದ ಶಿಷ್ಯ ಮಾತೆಯರು ಮಾಡಿದ್ದಾರೆ ಇದು ಅಪ್ರತಿಮ ಸಾಧನೆ. ಸಾತ್ವಿಕ ಸಂಸ್ಕøತಿಯನ್ನು ಹಾಗೂ ಗೋವಿನ ರಕ್ಷಣೆಗೆ ಕಟಿಬದ್ಧರಾಗಿರುವ ಶಂಕರ ಪರಂಪರೆಯ ರಾಮಚಂದ್ರಾಪುರ ಮಠದ ಶ್ರೀಗಳ ಜೊತೆಗೆ ಎಲ್ಲ ಸಂತ ಕುಲ ಇದೆ ಎಂದರು.
ವೀರ ಸೇನಾನಿ ಸಂದೀಪ ಉನ್ನಿಕೃಷ್ಣನ್ ಅವರ ತಂದೆ ಹಾಗೂ ಇಸ್ರೋದಲ್ಲಿ ಸೇವೆ ಸಲ್ಲಿಸಿದ ಡಾ. ಉನ್ನಿಕೃಷ್ಣನ್ ಗೋ ಸಂದೇಶ ನೀಡಿದರು. ರಾಮಕೃಷ್ಣ ವೇದಾಂತ ಆಶ್ರಮದ ಶ್ರೀ ಶ್ರೀ ಅಭಯಾನಂದಜೀ ಮಹರಾಜ್, ಗವಿ ಮಠದ ಶ್ರೀ ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮಿಗಳು ಗೋ ಸಂದೇಶ ನೀಡಿದರು. ಶ್ರೀ ಹರಿಶ್ಚಂದ್ರ ಅಗ್ರಗಾಮಿ, ಹಾಗೂ ಶ್ರೀದೇವಿ ರಂಗರಾಜು, ಯಲಹಂಕಾದ ವಿದಾನ ಸಭಾ ಸದಸ್ಯರಾದ ಎಸ್ ಆರ್ ವಿಶ್ವನಾಥ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ನಡುವಿನಲ್ಲಿ ಗೋ ಗೀತೆಗಳು ಗಮನ ಸೆಳೆದವು ಹಾಗೂ ಪಂಚಗವ್ಯ ಉತ್ಪನ್ನ ಅವಾಕಾಡೋ ಸಾಬೂನಿನ ಲೋಕಾರ್ಪಡೆ ನಡೆಯಿತು.