ಕುಮಟಾ : ಕೆ.ಡಿ.ಸಿ.ಸಿ ಬ್ಯಾಂಕ್ ಹಿರೇಗುತ್ತಿ ಬ್ರಹ್ಮಜಟಗ ಯುವಕ ಸಂಘ ಹಿರೇಗುತ್ತಿ ಹಾಗೂ ಊರ ನಾಗರಿಕರ ಸಹಯೋಗದಲ್ಲಿ ಬಿಳ್ಕೋಡುವಿಕೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ಕುಮಟಾಕ್ಕೆ ಅಭಿವೃದ್ಧಿ ಅಧಿಕಾರಿಯಾಗಿ ವರ್ಗಾವಣೆ ಗೊಂಡ ವಿನಾಯಕ ನಾಯಕ ಮಾತನಾಡಿ “ಹಿರೇಗುತ್ತಿ ಕೆ.ಡಿ.ಸಿ.ಸಿ ಬ್ಯಾಂಕ್ ಮೆನೆಜರ್ ಆಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಊರಿನ ಜನರು ಹಾಗೂ ಶ್ರೀ ಬ್ರಹ್ಮಜಟಗ ಯುವಕ ಸಂಘದವರು ನೀಡಿದ ಸಹಕಾರ ಪ್ರೋತ್ಸಾಹ ಅವಿಸ್ಮರಣೀಯ. ನನ್ನನ್ನು ಸನ್ಮಾನಿಸಿ ಬಿಳ್ಕೋಡುತ್ತಿರುವ ತಮಗೆಲ್ಲರಿಗೂ ಮನಃಪೂರ್ವಕವಾದ ಧನ್ಯವಾದಗಳು” ಎಂದರು.

RELATED ARTICLES  ಗೋಕರ್ಣದಲ್ಲಿ 'ಯಾಮಪೂಜೆ' ಸಂಪನ್ನ

ಮ್ಯಾನೇಜರ್ ಸತೀಶ ನಾಯ್ಕ ಮಾತನಾಡಿ ಬ್ಯಾಂಕಿನ‌ ಶ್ರೇಯೋಭಿವೃದ್ಧಿಗೆ ಹಿರೇಗುತ್ತಿ ನಾಗರಿಕರ ಸಹಕಾರ ಹೀಗೆಯೆ ಮುಂದುವರೆಯಲಿ ಎಂದರು. ಎನ್ ರಾಮು ಹಿರೇಗುತ್ತಿ ಸರ್ವರನ್ನು ಸ್ವಾಗತಿಸಿ ಮಾತನಾಡಿದರು. ವಿನಾಯಕ ನಾಯಕರು ಕೆ.ಡಿ.ಸಿ.ಸಿ. ಹಿರೇಗುತ್ತಿ ಶಾಖೆಯ ಮೆನೆಜರ್ ಆಗಿ ಹಿರೇಗುತ್ತಿ ಸುತ್ತಮುತ್ತಲಿನ ಬ್ಯಾಂಕಿನ ಗ್ರಾಹಕರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಉತ್ತಮ‌ ಸೇವೆ ಸಲ್ಲಿಸಿದ್ದಾರೆ ಇನ್ನೂ ಅವರ ಸೇವೆ ನಮಗೆ ಅವಶ್ಯಕವಿತ್ತು ಎಂದರು.

ರಾಮು ಕೆಂಚನ್. ರಾಜು ಗಾಂವಕರ. ಹರೀಶ ನಾಯಕ. ಉಮೇಶ ಗಾಂವಕರ. ಗ್ರಾ.ಪಂ ಸದಸ್ಯರಾದ ನಾಗರತ್ನ ಗಾಂವಕರ.ಆನಂದು ನಾಯಕ.ಮಹೇಶ ನಾಯಕ. ಸಣ್ಣಪ್ಪ ನಾಯಕ ಸನ್ಮಾನಿಸಿ ಬೀಳ್ಕೊಟ್ಟರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ವಿಜಯಲಕ್ಷ್ಮೀ ನಾಯಕ ಜಯಲಕ್ಷ್ಮೀ ನಾಯಕ ಹಾಗೂ ನಾಗರಾಜ ಜಿ ನಾಯಕ, ಅರವಿಂದ ನಾಯಕ, ಸಂತೋಷ ನಾಯಕ, ಚಂದ್ರಕಾಂತ ಗಾಂವಕರ ಬ್ರಹ್ಮಾನಂದ ನಾಯಕ ರಾಘು ಹಿತ್ತಲಮಕ್ಕಿ ಮಾಣೇಶ್ಷರ ಗೌಡ ಉದ್ದಂಡ ನಾಯಕ ವೆಂಕಟ್ರಾಯ ,ನಾಯಕ ರಾಜು ನಾಯಕ ಶಂಕರ ಶೇಟ್ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.

RELATED ARTICLES  ಉತ್ತರಕನ್ನಡದಲ್ಲಿ ಜಾತ್ರೆ ಹಬ್ಬಹುಣ್ಣಿಮೆಗಳು ರದ್ದು..!