ಕುಮಟಾ : ಗೋಕರ್ಣ ಪೊಲೀಸ್ ಠಾಣೆ ಹಾಗೂ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಸಹಯೋಗದೊಂದಿಗೆ ಹಿರೇಗುತ್ತಿ ಹೈಸ್ಕೂಲ್ ನಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃ ತಿ ಕಾರ್ಯಕ್ರಮವನ್ನು ದಿನಾಂಕ 27-06-2021 ರಂದು ನಡೆಸಲಾಯಿತು. ಗೋಕರ್ಣ ಠಾಣೆಯ ಎ.ಎಸ್.ಐ. ಅರವಿಂದ ಶೆಟ್ಟಿ ಮಾತನಾಡಿ “112 ತುರ್ತು ಸೇವಾ ವಾಹನ ಮತ್ತು ಅದರ ಪ್ರಯೋಜನ ವನ್ನು ಹೇಗೆ ಪಡೆದುಕೊಳ್ಳಬಹುದು ಅಂತಾ ತಿಳಿಸಿದರು.
ಮೊಬೈಲ್ ನ ಸದುಪಯೋಗ ಮತ್ತು ದುರುಪಯೋಗ ಅದರಿಂದಾಗಬಹುದಾದ ಸೈಬರ್ ಅಪರಾಧ ಗಳ ಬಗ್ಗೆ ತಿಳಿಸಿದರು”.
ಮಹಿಳಾ ಎ.ಎಸ್.ಐ ಲಲಿತಾ ರಜಪೂತ್ ಮಾತನಾಡಿ ವಿದ್ಯಾರ್ಥಿನಿಯರ ಸುರಕ್ಷತೆ, ಬಾಲ್ಯ ವಿವಾಹ ಕಾಯಿದೆ. ಪೋಕ್ಸೋ ಕಾಯಿದೆ ಬಗ್ಗೆ ತಿಳುವಳಿಕೆ ನೀಡಿದರು.
ಠಾಣೆಯ ಸಿಬ್ಬಂದಿಯಾದ ಅನುರಾಜ ನಾಯ್ಕ ಕಾರ್ಯಕ್ರಮ ಉದ್ದೇಶಿಸಿ “ಶಾಲೆಗೆ ಬಂದು, ಹೋಗುವಾಗ ಪಾಲಿಸಬೇಕಾದ ಸಂಚಾರಿ ನಿಯಮಗಳ ಬಗ್ಗೆ, ಅಪ್ರಾಪ್ತರು ವಾಹನ ಚಲಾಯಿಸುವುದರಿಂದ ಉಂಟಾಗುವ ಸಮಸ್ಯೆ ಗಳ ಬಗ್ಗೆ, ಸೋಷಿಯಲ್ ಮೀಡಿಯಾದ ದುರ್ಬಳಕೆ ತಂದೊಡ್ಡುವ ಕಾನೂನು ಸಮಸ್ಯೆಗಳ ಬಗ್ಗೆ ತಿಳುವಳಿಕೆ ನೀಡಿದರು” ಠಾಣೆಯ ಸಿಬ್ಬಂದಿ ಯವರಾದ ಮಹೇಶ ನಾಯ್ಕ, ರವಿ ನಾಯ್ಕ ಶಿಕ್ಷಕರಾದ ಬಾಲಚಂದ್ರ ಹೆಗಡೆಕರ್, ನಾಗರಾಜ ನಾಯಕ.ಶಿಲ್ಪಾ ನಾಯಕ, ಇಂದಿರಾ ನಾಯಕ, ಜಾನಕಿ ಗೊಂಡ,ಕವಿತಾ ಅಂಬಿಗ, ಗೋಪಾಲಕೃಷ್ಣ ಗುನಗಾ ಉಪಸ್ಥಿತರಿದ್ದರು. ಎನ್ ರಾಮು ಹಿರೇಗುತ್ತಿ ಕಾರ್ಯಕ್ರಮ ನಿರ್ವಹಣೆ ಮಾಡಿದರು ಮಹಾದೇವ ಗೌಡ ಸರ್ವರನ್ನು ವಂದಿಸಿದರು. ಎಲ್ಲಾ ವಿದ್ಯಾರ್ಥಿಗಳು ಜಾಗೃತಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.