ಕುಮಟಾ : ಕುಮಟಾ ಕಡೆಯಿಂದ ಕಾರವಾರ ಕಡೆಗೆ ತೆರಳುತ್ತಿದ್ದ ಅಂಬುಲೆನ್ಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿ ಘಟನೆ ನಡೆದಿದೆ. ಕುಮಟಾ ತಾಲೂಕಿನ ಕೈಗೆ ಕ್ರಾಸ್ ಸಮೀಪ ಈ ದುರ್ಘಟನೆ ಸಂಭವಿಸಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.

RELATED ARTICLES  ಯಶಸ್ವಿಯಾದ ಉಚಿತ ಮನೆಪಾಠ ಮತ್ತು ಸಂಸ್ಕಾರ ಕೇಂದ್ರದ "ವಾರ್ಷಿಕೋತ್ಸವ".

ಅಂಬುಲೆನ್ಸ್ ವೀಲ್ ಜಾಂಮ್ ಆದ ಕಾರಣದಿಂದಾಗಿ ಅಂಬುಲೆನ್ಸ್ ಚಾಲಕನ ನಿಯಂತ್ರಣಕ್ಕೆ ಸಿಗದ ಪಲ್ಟಿಯಾಗಿದೆ ಎನ್ನಲಾಗಿದೆ. ಪ್ರತ್ಯಕ್ಷದರ್ಶಿಗಳು ಈ ಬಗ್ಗೆ ಮಾಹಿತಿ ನೀಡಿದ್ದು ಅಂಬುಲೆನ್ಸ್ ಕೊರತೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಎಂದಿದ್ದಾರೆ.

ಕಾರವಾರದ ಮದರ್ ತೆರೇಸಾ ಆಸ್ಪತ್ರೆಗೆ ಸಂಬಂಧಿಸಿದ ಆಂಬುಲೆನ್ಸ್ ಇದಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಆಂಬುಲೆನ್ಸ್ ನಲ್ಲಿ ಯಾವುದೇ ರೋಗಿಗಳು ಇಲ್ಲದ ಕಾರಣ ಯಾವುದೇ ದೊಡ್ಡಮಟ್ಟದ ಅನಾಹುತ ಸಂಭವಿಸಿಲ್ಲವಾಗಿದೆ. ಆದರೆ ಅಂಬುಲೆನ್ಸ್ ಪಲ್ಟಿಯಾಗಿದ್ದು ವಾಹನದ ಹೊರಮೈ ಝಕಂ ಆಗಿದೆ ಎನ್ನಲಾಗಿದೆ.

RELATED ARTICLES  ಮಂಕಾಳರ ಬೆಂಬಲಕ್ಕೆ ನಿಂತ ಕೆನರಾ ಮುಸ್ಲಿಮ್ ಖಲೀಝ್ ಕೌನ್ಸಿಲ್ ಸಂಘಟನೆ!