ಕುಮಟಾ: ಮಕ್ಕಳಲ್ಲಿ, ಪೋಷಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಪೋಷಕಾಂಶಗಳ ಬಗ್ಗೆ ಅರಿವು,ಜಾಗ್ರತಿ ಮೂಡಿಸಿ ಪೋಷಕಾಂಶಗಳ ಮಹತ್ವವನ್ನು ತಿಳಿಸುವ. ” ಪೋಷಣಾ ಅಭಿಯಾನ” ಹೊಲನಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ವಿವಿಧ ಪೋಷಕಾಂಶಯುಕ್ತ ಹಣ್ಣು,ತರಕಾರಿ,ಆಹಾರಧಾನ್ಯಗಳು, ಸಸ್ಯಗಳನ್ನು ಬಳಸಿ ವಿದ್ಯಾರ್ಥಿಗಳು ಚಿತ್ತಾಕರ್ಷಕ ವಿನ್ಯಾಸಗಳನ್ನು ಮಾಡಿದ್ದರು. ಧಾನ್ಯಗಳಿಂದ ರಚಿಸಿದ ಈಶ್ವರ ಲಿಂಗ, ತರಕಾರಿಗಳಿಂದ ಮಾಡಿದ ಮನುಷ್ಯನಾಕೃತಿ, ನವಧಾನ್ಯಗಳನ್ನು ಬಳಸಿ ಮಾಡಿದ ರಂಗೋಲಿಗಳು ಗಮನಸೆಳೆದವು.

ಹೊಲನಗದ್ದೆ ಗ್ರಾಮ ಪಂಚಾಯತದ ಸದಸ್ಯರಾದ ದೀಪಾ ಹಿಣಿ, ಮಹಂತೇಶ ಹರಿಕಂತ್ರ, ಹಾಗೂ ಪಂಚಾಯತ ಸದಸ್ಯರೂ ಎಸ್.ಡಿ.ಎಮ್.ಸಿ.ಅಧ್ಯಕ್ಷರೂ ಆದ ಚಂದ್ರಹಾಸ ನಾಯ್ಕ, ಉಪಾಧ್ಯಕ್ಷೆ ಶಾಂತಿ ಮುಕ್ರಿ, ರಮ್ಯಾ ಶೇಟ್, ಸಿ.ಆರ್.ಪಿ.ಗಳಾದ ಪ್ರದೀಪ ನಾಯಕ, ಬಿ.ಆರ್.ಸಿ. ಸಿಬ್ಬಂದಿ ಅರುಣ ಆಚಾರಿ,ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು, ಪಾಲಕ ಪೋಷಕರು ಹಾಜರಿದ್ದು ಮಕ್ಕಳ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

RELATED ARTICLES  ಕಾರವಾರದಲ್ಲಿ ಬೈಕ್‌ ಅಪಘಾತ : ಛಿದ್ರ ಛಿದ್ರವಾದ ಸವಾರನ ತಲೆ!

ಶಿಕ್ಷಕಿ ಮಂಗಲಾ ನಾಯ್ಕ ಪೋಷಣಾ ಅಭಿಯಾನದ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು. ಮುಖ್ಯಾಧ್ಯಾಪಕ ರವೀಂದ್ರ ಭಟ್ಟ ಸೂರಿ “ಬದಲಾದ ಆಹಾರ ಪದ್ಧತಿ ಹೇಗೆ ನಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತಿದೆ, ಮತ್ತು ಅದನ್ನು ಸರಿಪಡಿಸಿಕೊಳ್ಳುವುದು ಹೇಗೆ? ನಮ್ಮ ಆರೋಗ್ಯ ರಕ್ಷಣೆಯಲ್ಲಿ ಪೋಷಕಾಂಶಗಳ ಪಾತ್ರ ಏನು?” ಎಂಬ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಹಾಜರಿದ್ದ ಪ್ರತಿಯೊಬ್ಬರಿಗೂ ತುಳಸೀ ಗಿಡಗಳನ್ನು ವಿತರಿಸಲಾಯಿತು. ಶಿಕ್ಷಕರಾದ ವೀಣಾ ನಾಯ್ಕ, ಶ್ಯಾಮಲಾ ಎಮ್ ಪಟಗಾರ, ಶ್ಯಾಮಲಾ ಬಿ ಪಟಗಾರ, ದೀಪಾ ನಾಯ್ಕ ಸಹಕರಿಸಿದರು.

RELATED ARTICLES  ರಾಷ್ಟ್ರ ಮಟ್ಟದಲ್ಲಿ 776 ನೇ Rank ಪಡೆದ ಸರಸ್ವತಿ ಪಿ.ಯು. ಕಾಲೇಜಿನ ವಿದ್ಯಾರ್ಥಿ