ಕುಮಟಾ: ತಾಲೂಕಿನ ಬಡಗಣಿ ನದಿಯಲ್ಲಿ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ವರದಿಯಾಗಿದೆ. ಇಲ್ಲಿನ ಊರಕೇರಿ ಗ್ರಾಮದ ಹರಿಜನಕೇರಿ ನಿವಾಸಿ ಮಂಜುನಾಥ ಮಾಳು ಮುಕ್ರಿ ಮೃತಪಟ್ಟ ಯುವಕನೆಂದು ತಿಳಿದುಬಂದಿದೆ.

ಸಾಮಗ್ರಿಗಳನ್ನು ಖರೀದಿಸಿ ಮನೆಗೆ ಮರಳುವಾಗ ಬಡಗಣಿ ನದಿಯಲ್ಲಿ ಹಾಕಲಾದ ಕಾಲು ಸಂಕ ದಾಟುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ನದಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಹಾಗೂ ಕುಮಟಾ ಪೊಲೀಸರು ಸ್ಥಳಕ್ಕಾಗಮಿಸಿ ಮಂಜುನಾಥ ಮುಕ್ರಿ ಅವರ ಮೃತದೇಹವನ್ನು ಹೊರತೆಗೆದು ಪರಿಶೀಲನೆ ನಡೆಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿ ಮೃತನ ತಮ್ಮ ಪಂಚಕ ಮಾಳು ಮುಕ್ರಿ ಕುಮಟಾ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES  ಸಮುದ್ರದಲ್ಲಿ ಮುಳುಗಿ ಪ್ರವಾಸಿಗ ಸಾವು : ಗೋಕರ್ಣದಲ್ಲಿ ನಡೆದ ದುರ್ಘಟನೆ