ಯಲ್ಲಾಪುರ : ರಾಷ್ಟ್ರೀಯ ಹೆದ್ದಾರಿ 63 ರ ಯಲ್ಲಾಪುರ ತಾಲೂಕಿನ ಆರತಿಬೈಲ್ ಘಟ್ಟದ ಸಮೀಪದ ಕಣ್ಣಿಮನೆ ಕ್ರಾಸ್ ನಲ್ಲಿ ಬುಧವಾರ ಬೆಳಿಗ್ಗೆ ಲಾರಿಯೊಂದು ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಸ್ಕೂಟಿ ಸವಾರನು ಸ್ಥಳದಲ್ಲೇ ಮೃತಪಟ್ಟು, ಹಿಂಬದಿಯ ಸವಾರ ಗಾಯಗೊಂಡ ಘಟನೆ ನಡೆದಿದೆ.

RELATED ARTICLES  ಸಂಸ್ಕೃತ ಭಾಷೆಯ ಶಬ್ದ ಭಂಡಾರವನ್ನು ಯಾವ ಭಾಷೆಯ ಶಬ್ದ ಭಂಡಾರವೂ  ಸರಿಗಟ್ಟಲು ಸಾಧ್ಯವಿಲ್ಲ : ಶಂಕರ ಭಟ್ಟ

ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಅತಿ ವೇಗವಾಗಿ ಬಂದ ಲಾರಿಯು ಇವರ ಬೈಕಿಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಗೌಂಡಿ ಕೆಲಸ ಮಾಡುವ ಪಟ್ಟಣದ ವಲೀಶಾ ಗಲ್ಲಿಯ ೪೪ ವರ್ಷದ ದುಂಡು ಗೋಂದಳಿ ಎಂದು ಗುರುತಿಸಲಾಗಿದೆ. ಬೈಕ್ ಹಿಂಬದಿ ಕುಳಿತಿದ್ದ ನೂತನನಗರದ ಗಣಪತಿ ಬಾಬು ಗೌಡ ಗಾಯಗೊಂಡಿದ್ದಾನೆ. ಇವರು ಈ ಕುರಿತು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES  The full story of Thailand’s extraordinary cave rescue