ಕುಮಟಾ:ತಾಲೂಕಿನ ಮಿರ್ಜಾನ ಕಂದಾಯ ನಿರೀಕ್ಷಕರು ಪ್ರಭಾರ ಮಿರ್ಜಾನ ನಾಡಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಣ್ಣಯ್ಯ ಅವರನ್ನು ವರ್ಗಾವಣೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪ ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿದೆ.

ಕಂದಾಯ ನಿರೀಕ್ಷಕರು ಮಿರ್ಜಾನ ಪ್ರಭಾರ ಮಿರ್ಜಾನ ರವರನ್ನು ನಾಗೂರ ಗ್ರಾಮದ ಸರಕಾರಿ ಪಡ‌ ಜಮೀನು ಸುಮಾರು 20 ಎಕರೆ ಜಮೀನನ್ನು ಅತಿಕ್ರಮಣ ಮಾಡಿರುವುದರನ್ನು ಮಾನ್ಯ ತಹಶೀಲ್ದಾರ ಕುಮಟಾ ರವರ ನಿರ್ದೇಶನದಂತೆ ದಿನಾಂಕ 24-09-2021 ರಂದು ಖುಲ್ಲಾ ಪಡಿಸಿರುವುದರಿಂದ RI ಅಣ್ಣಯ್ಯ ಇವರನ್ನು ವರ್ಗಾವಣೆ ಮಾಡುವ ಸಂಚನ್ನು ಕಾಣದ ಕೈಗಳು ಹುನ್ನಾರ ನಡೆಸುತ್ತಿರುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿ ಬರುತ್ತಿವೆ.
ಸರ್ಕಾರದ ಜಮೀನನ್ನು ರಕ್ಷಣೆ ಮಾಡಿದವರ ಮೇಲೆ ವರ್ಗಾವಣೆ ಅಸ್ತ್ರ ಉಪಯೋಗಿಸುವುದು ಎಷ್ಟು ಸರಿ ಎಂಬುದು ಪ್ರಜ್ನಾವಂತ ನಾಗರಿಕರ ಪ್ರಶ್ನೆಯಾಗಿದೆ.

RELATED ARTICLES  ‘ಹಣತೆ’ ದಾಂಡೇಲಿ ತಾಲೂಕು ಸಮಿತಿ ಅಸ್ತಿತ್ವಕ್ಕೆ


ಮಿರ್ಜಾನ ಹೋಬಳಿಯಲ್ಲಿ ಸಾರ್ವಜನಿಕರಿಗೆ ಸ್ಪಂದಿಸುವ ಅಧಿಕಾರಿಗಳಿಗೆ ಈ ರೀತಿ ಆದರೆ ಸಾಮಾನ್ಯ ಜನರನ್ನ ರಕ್ಷಣೆ ಮಾಡುವವರು ಯಾರು ಎಂಬುದು ಸಾಮಾನ್ಯ ಜನರಲ್ಲಿ ಪ್ರಶ್ನೆ ಮೂಡುವಂತಾಗಿದೆ. ಕಳೆದ ಒಂದು ವರ್ಷದಿಂದ ಮಿರ್ಜಾನ ನಾಡ ಕಛೇರಿಯಲ್ಲಿ ಜನಮೆಚ್ಚುಗೆ ಗಳಿಸಿ ಕಾರ್ಯ ನಿರ್ವಹಿಸುತ್ತಿರುವ ಕಂದಾಯ ನೀರಿಕ್ಷಕರು ಪ್ರಭಾರ ಮಿರ್ಜಾನ ಅವರನ್ನು ವರ್ಗಾವಣೆ ಮಾಡದಂತೆ ಗ್ರಾಮಸ್ಥರು ವಿರೋದ ವ್ಯಕ್ತಪಡಿಸಿದ್ದಾರೆ.

RELATED ARTICLES  ಕಡಲ ತೀರಗಳಿಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಮುಂದಿನ 48 ಗಂಟೆ ತೆರಳದಂತೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ