ರೈಲ್ವೇ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಭಟ್ಕಳ ತಾಲೂಕಿನ ಸಿಇಎನ್ ಮತ್ತು ನಗರ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ತಾಲೂಕಿನ ರೈಲ್ವೇ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಅಬ್ದುಲ್ ರಷೀದ್, ಮಹಮ್ಮದ್ ಇರ್ಷಾದ ಎಂಬವರು ಬಂಧಿತ ಆರೋಪಿಗಳು. ಇವರು ಮಂಗಳವಾರ ರಾತ್ರಿ ಭಟ್ಕಳ ರೈಲ್ವೇ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಸುಮಾರು 560 ಗ್ರಾಂ ತೂಕದ ಗಾಂಜಾವನ್ನು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಮಾದಕ ವಸ್ತುವಾದ ಗಾಂಜಾವನ್ನು ತಮ್ಮ ವಶದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಬಂಧಿಸಲಾಗಿದೆ. ಆರೋಪಿಗಳಿಂದ ಒಟ್ಟು 560 ಗ್ರಾಂ ಗಾಂಜಾ, ವಶಪಡಿಸಿಕೊಂದಿದ್ದಾರೆ. ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.

ಅಂಗಡಿಯಲ್ಲಿ ಕಳ್ಳತನ : ಗೋಕರ್ಣದ ತದಡಿಯ ಬೇಲೆಕಾನನಲ್ಲಿ ಘಟನೆ

ಅಂಗಡಿ ಕಳ್ಳತನ ಮಾಡಿದ ಘಟನೆ ಗೋಕರ್ಣದ ತದಡಿಯ ಬೇಲೆಕಾನನಲ್ಲಿ ನಡೆದಿದೆ. ಶ್ರೀಧರ ಅನಂತ ನಾಯ್ಕ ಎಂಬುವವರ ಅಂಗಡಿಯಲ್ಲಿ ಈ ಕೃತ್ಯ ನಡೆದಿದೆ. ಈ ಬಗ್ಗೆ ಇಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಗಡಿಯಲ್ಲಿದ್ದ 10.5ಲಕ್ಷ ರು.ನಗದು ದೋಚಿದ್ದಾರೆ. ಘಟನಾ ಸ್ಥಳಕ್ಕೆ ಪಿ.ಎಸ್.ಐ. ನವೀನ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಚರುಕುಗೊಳಿಸಿದ್ದಾರೆ.ಶ್ವಾನದಳ ಆಗಮಿಸಿ ಪರಿಶೀಲನೆ ಮಾಡಿದೆ. ಅಂಗಡಿ ಮಾಲಿಕ ಜಾಗ ಮಾರಿದ ಹಣವನ್ನು ಹಲವು ದಿನಗಳಿಂದ ತನ್ನ ಅಂಗಡಿಯಲ್ಲಿ ಇಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ.

RELATED ARTICLES  ಶರಾವತಿಯ ಒಡಲು ಸೇರಿದ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮ