ಶಿರಸಿ: ಉತ್ತರ ಕನ್ನಡದ ಹಲವು ಭಾಗದಲ್ಲಿ ಒಂದಿಲ್ಲೊಂದು ಕಳ್ಳತನ ಪ್ರಕರಣಗಳು ಆಗಾಗ ಸುದ್ದಿಯಾಗುತ್ತಲೇ ಇದೆ ಇದೀಗ ನಿಲ್ಲಿಸಿಟ್ಟಿದ್ದ ಕಾರ್ ಒಳಗಿದ್ದ ಬಂಗಾರದ ಚೈನ್ ಕಳ್ಳತನ ಮಾಡಿದ ಸುದ್ದಿಯೊಂದು ವರದಿಯಾಗಿದೆ. ಅದಷ್ಟೇ ಅಲ್ಲ ಘಟನೆ ನಡೆದ 24 ಗಂಟೆಯೊಳಗಾಗಿ ಪೊಲೀಸರು ಆರೋಪಿಯನ್ನು ಹೆಡೆಮುರಿಕಟ್ಟಿದ್ದು ಜನಮೆಚ್ಚುಗೆಗೆ ಪಾತ್ರವಾಗಿದೆ.

ನಿಲ್ಲಿಸಿಟ್ಟಿದ್ದ ಕಾರ್ ಒಳಗಿದ್ದ ಬಂಗಾರದ ಚೈನ್ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಇಲ್ಲಿನ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕಾರಿನ ಒಳಗಡೆ ಬ್ಯಾಗಿನಲ್ಲಿ ಇಟ್ಟಿದ್ದ 13 ಗ್ರಾಮ್ ತೂಕದ 55 ಸಾವಿರ ರೂಪಾಯಿ ಬೆಲೆ ಬಾಳುವ ಬಂಗಾರದ ಚೈನ್ ಕಳ್ಳತನ ಮಾಡಿದ್ದ.

RELATED ARTICLES  ಉಪಚುನಾವಣೆಯ ಫಲಿತಾಂಶದ ನಂತರ ಮತ್ತೆ ಸಾರ್ವತ್ರಿಕ ಚುನಾವಣೆ ಎದುರಾಗಲಿದೆ: ದೇಶಪಾಂಡೆ

ಮೋಹನ ನಾಯ್ಕ ಮಲ್ಲತಳ್ಳಿ ಬಂಧಿತ ಆರೋಪಿ. ಈತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಣನಬಿಡಕಿ ಟೆಂಪೊ ಸ್ಟಾಂಡ್ ಹತ್ತಿರ ಸಂತೋಷ ಚೌರದ ಇವರಿಗೆ ಸೇರಿದ್ದ ಕಾರಿನ ಒಳಗಡೆ ಬ್ಯಾಗಿನಲ್ಲಿ ಇಟ್ಟಿದ್ದ ಚಿನ್ನವನ್ನು ಹೊಂಚುಹಾಕಿ ಎಗರಿಸಿದ್ದ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತನಿoದ ಕಳುವಾದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ. ಪೊಲೀಸರ ಚುರುಕಿನ ಕಾರ್ಯಾಚರಣೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

RELATED ARTICLES  ಯಕ್ಷಕಲಾ ಭಿತ್ತಿಚಿತ್ರ (Mural Painting) ಕಾರ್ಯಾಗಾರ ಕೇರಳದ ಭಿತ್ತಿಚಿತ್ರ ಯಕ್ಷಗಾನಕ್ಕೆ ಆಲಿಂಗನ