ಕುಮಟಾ: ಕುಮಟಾ ಮತ್ತು ಶಿರಸಿಯಲ್ಲಿ ಸುಸಜ್ಜಿತವಾದ ನೂತನ ಇಎಸ್‍ಐ ಆಸ್ಪತ್ರೆಯನ್ನು ಸ್ಥಾಪಿಸಲು ಅನುಮತಿ ನೀಡಿದ ಕೇಂದ್ರ ಮಂತ್ರಿ ಭೂಪೇಂದ್ರ ಯಾದವ ಹಾಗೂ ಸಂಸದ ಅನಂತಕುಮಾರ ಹೆಗಡೆಯವರ ಕಾರ್ಯ ಶ್ಲಾಘನೀಯ ಎಂದು ಬಿ.ಜೆ.ಪಿ ಮುಖಂಡ ನಾಗರಾಜ ನಾಯಕ ತೊರ್ಕೆ ತಿಳಿಸಿದ್ದಾರೆ.
ಕುಮಟಾ ಹಾಗೂ ಸಿರಸಿಯಲ್ಲಿ ನೂತ ಇಎಸ್‍ಐ ಆಸ್ಪತ್ರೆಯನ್ನು ಸ್ಥಾಪಿಸಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗಿ ಪರಿಸರ ಹಾಗೂ ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಿ ಭೂಪೇಂದ್ರ ಯಾದವ ಅನುಮತಿಸಿದ್ದು, ಅವರಿಗೆ ಹಾಗೂ ಜಿಲ್ಲೆಯಲ್ಲಿ ಇಎಸ್‍ಐ ಆಸ್ಪತ್ರೆ ಸ್ಥಾಪಿಸಲು ಕೇಂದ್ರ ಮಂತ್ರಿಗಳ ಗಮನ ಸೆಳೆದು, ಮಂಜೂರಾತಿ ತರುವಲ್ಲಿ ಪ್ರಮುಖ ಪಾತ್ರವಹಿಸಿದ ಸಂಸದ ಅನಂತಕುಮಾರ ಹೆಗಡೆಯವರಿಗೆ ಬಿ.ಜೆ.ಪಿ ಮುಖಂಡ ನಾಗರಾಜ ನಾಯಕ ತೊರ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಎರಡು ವೈದ್ಯರನ್ನೊಳಗೊಂಡ ಇಎಸ್‍ಐ ಆಸ್ಪತ್ರೆಗೆ ಅನುಮತಿ ದೊರಕಿದ್ದು, ಇದರಿಂದ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ತುಂಬಾ ಅನುಕೂಲವಾಗಲಿದೆ. ಅನಾರೋಗ್ಯದ ಕಾರಣ ದೂರದ ಊರಿಗೆ ಅಲೆದಾಡುವುದು ಹಾಗೂ ತುರ್ತು ಪರಿಸ್ಥಿತಿಯಲ್ಲಿ ದೂರ ಪ್ರಯಾಣದ ಅವಧಿಯನ್ನು ತಪ್ಪಿಸಿ ಶೀಘ್ರ ಮತ್ತು ಸಕಾಲದಲ್ಲಿ ಚಿಕಿತ್ಸೆ ದೊರೆಯುವಲ್ಲಿ ಇದು ಮುಖ್ಯ ಪಾತ್ರವಹಿಸುತ್ತದೆ ಎಂದರು.