ಹೊನ್ನಾವರ : ತಾಲೂಕಿನ ಗುಣವಂತೆಯಲ್ಲಿ ಕನ್ನಡ ಸಿನಿಮಾ ರಂಗದ ಖ್ಯಾತ ನಟ, ಮರೆಯದ ಮಾಣಿಕ್ಯ ಶಂಕರ ನಾಗ್ ಅವರ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಶಂಕರ್ ನಾಗ್ ಅಭಿಮಾನಿ ಬಳಗ (ರಿ.) ದಿಂದ ಬಳಗದ ಕಚೇರಿಯಲ್ಲಿ ಶಂಕರ್ ನಾಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಭಂಡೂರೆಶ್ವರಿ ದೇವಿ ದೇವಾಲಯ, ಶ್ರೀ ಕ್ಷೇತ್ರ ಭಂಡೂರಿನ ಧರ್ಮದರ್ಶಿಗಳಾದ ಶ್ರೀ ಪ್ರಶಾಂತರವರ ನೇತೃತ್ವದಲ್ಲಿ ಸಭೆ ನಡೆಯಿತು.

ಶಂಕರ್ ನಾಗ್ ಅವರ ಹುಟ್ಟೂರಾದ ಹೊನ್ನಾವರದಲ್ಲಿ ಅವರ ಪ್ರತಿಮೆ ನಿರ್ಮಾಣ ಆಗಬೇಕು ಮತ್ತು ಅವರ ಹೆಸರಿನಲ್ಲಿ ಅವರ ಜೀವನ ಚರಿತ್ರೆ ಕಾಣುವಂತಹ ಪಾರ್ಕ್‌ ಸಹ ಮುಂದಿನ ದಿನಗಳಲ್ಲಿ ಅಗಬೇಕು ಎಂದು ಶ್ರೀ ಕ್ಷೇತ್ರ ಭಂಡೂರಿನ ಧರ್ಮದರ್ಶಿಗಳಾದ ಶ್ರೀ ಪ್ರಶಾಂತ ತಿಳಿಸಿದರು‌‌.

RELATED ARTICLES  ಮಲ್ಪೆ ಬಂದರಿನಿಂದ ತೆರಳಿದ ಮೀನುಗಾರರು ನಾಪತ್ತೆ : ಅವರನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ

ಶಂಕರ್ ನಾಗ್ ಅವರ ಪ್ರತಿಮೆ ನಿರ್ಮಿಸಲು ಬೇಕಾದಂತಹ ಎಲ್ಲಾ ಸೌಲಭ್ಯಗಳನ್ನು ಸಹ ಮಾಡುತ್ತೇವೆ ಹಾಗೂ ಹೊನ್ನಾವರದಿಂದ ಬೆಂಗಳೂರಿಗೆ ಬೈಕ್ ರ್ಯಾಲಿ ಮುಖಾಂತರ ಹೋಗಿ ಅಲ್ಲಿ ಕಾರ್ಯಕ್ರಮವನ್ನು ಮಾಡಿ ಪ್ರತಿಮೆ ನಿರ್ಮಾಣಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತೇವೆ. ಅನೇಕ ಕನ್ನಡ ಪರ ಸಂಘಟನೆಗಳು ಮತ್ತು ಶಂಕರ್ ನಾಗ್ ಅಭಿಮಾನಿಗಳು ಜೊತೆಯಾಗಲಿದ್ದಾರೆ ಎಂದರು.

RELATED ARTICLES  ಹೊನ್ನಾವರ ಎಸ್.ಡಿ.ಎಂ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆಸುವ ಸಿಎ ಫೌಂಡೇಶನ್ ಕೋರ್ಸ ಪ್ರಾರಂಭ

ಈ ಸಂದರ್ಭದಲ್ಲಿ ಶ್ರೀರಾಮ್ ಜಾದುಗರ್ ಅವರು ಮಾತನಾಡಿ ಶಂಕರ್ ನಾಗ್ ಅವರು ನಡೆದುಬಂದ ಜೀವನದ ಬಗ್ಗೆ ಬಹಳಷ್ಟು ವಿಷಯಗಳನ್ನು ತಿಳಿಸಿದರು. ಹಾಗೂ ಹಲವಾರು ಶಂಕರ್ ನಾಗ್ ಅಭಿಮಾನಿಗಳು ಭಾಗಿಯಾಗಿ ಹೊನ್ನಾವರದಲ್ಲಿ ಶಂಕರ್ ನಾಗ್ ಪ್ರತಿಮೆ ನಿರ್ಮಾಣಕ್ಕೆ ನಾವು ಜೊತೆಯಾಗುವುದಾಗಿ ತಿಳಿಸಿ ಇದಕ್ಕಾಗಿ ಎಂಥಾ ಹೋರಾಟಕ್ಕೂ ಸಿದ್ದರೆಂದು ತಿಳಿಸಿದರು. ಬೇರೆ ಬೇರೆ ಕಲಾ ಕ್ಷೇತ್ರದ ಅನೇಕ ಕಲಾವಿದರು ಭಾಗವಹಿಸಿದ್ದು ವಿಶೇಷವಾಗಿತ್ತು.