ಕುಮಟಾ: ಶಿಲಾ ದತ್ತ ಮಂದಿರ ನಿರ್ಮಾಣ ಸಹಾಯಾರ್ಥ ಹಾಗೂ ಲೋಕಕಲ್ಯಾಣಾರ್ಥ ಶನಿ ಆರಾಧನಾ ಮಹೋತ್ಸವವು ಮೇ.25, 26 ಹಾಗೂ 27 ರಂದು ಕುಮಟಾದ ದತ್ತಮಂದಿರದಲ್ಲಿ ನಡೆಯಲಿದೆ ಎಂದು ದತ್ತಮಂದಿರ ಪ್ರತಿಷ್ಠಾನದ ಅಧ್ಯಕ್ಷ ಸತೀಶ ನಾಯ್ಕ ಹೇಳಿದರು.

ಅವರು ಬುಧವಾರ ಕುಂಭೇಶ್ವರ ರಸ್ತೆಯಲ್ಲಿರುವ ದತ್ತಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮೇ. 25 ರಂದು 23,000 ವೇದೊಕ್ತ ಶನಿ ಜಪ ಪ್ರಾರಂಭವಾಗುತ್ತದೆ. 26 ರಂದು 10 ಘಂಟೆಗೆನವಗ್ರಹ ಪೂರ್ವಕ ಶನಿಶಾಂತಿ ಪ್ರಾರಂಭವಾಗಲಿದೆ. ಹಾಗೂ 27 ರಂದು ಬೆಳಿಗ್ಗೆ 10 ಘಂಟೆಗೆ ದತ್ತ ದೇವರಲ್ಲಿ 108 ಶನ್ನಸೂಕ್ತ, ಪಾರಾಯಣ, ಏಕಾದಶತರುದ್ಧ, ಫಲಪಂಚಾಮೃತ, ನವ ಧಾನ್ಯಾಭಿಷೇಕ ಸಹಸ್ರನಾಮ, ಸಹಸ್ರಾಧಿಕ ಶನಿಕಲಶ ಸ್ಥಾಪನೆ ನಡೆಯಲಿದೆ. ಸಂಜೆ 4.30 ಘಂಟೆಯಿಂದ ಸಹಸ್ರಾಧಿಕ ಶನಿಕತೆ ಪ್ರಾರಂಭ, 6.30 ರಿಂದ ಶನಿಕಥಾ ಶ್ರವಣ ಹಾಗೂ 7.30 ಕ್ಕೆ ಶನಿಕತೆಯ ಮಂಗಲಾರತಿ ನಡೆಯಲಿದೆ ಎಂದರು.

RELATED ARTICLES  ಭಾರತೀಯ ವಿಜ್ಞಾನ ಪ್ರಚಾರಕ್ಕೆ ವಿವಿವಿ- ಎಂಐಟಿ ಸಹಯೋಗ: ರಾಘವೇಶ್ವರಶ್ರೀ

ದತ್ತ ಮಂದಿರದ ನಿರ್ಮಾಣ ಕಾಮಗಾರಿಯೂ ಅನೇಕ ಕಾರಣಾಂತರಗಳಿಂದ ಕುಂಠಿತವಾಗಿರುವುದರ ಜೊತೆಗೆ ಕೆಲಸಗಾರರ ಕೊರತೆಯೂ ಕಾರಣವಾಗಿತ್ತು. ಪ್ರತಿಯೊಬ್ಬ ಭಕ್ತಾಧಿಗಳೂ ಸ್ವಯಂ ಪ್ರೇರಣೆಯಿಂದ ಈ ಕಾರ್ಯಕ್ರಮಕ್ಕೆ ಕೈಜೋಡಿಸಿದರೆ ಇನ್ನೂ ಉತ್ತಮ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗುತ್ತದೆ. ಶಿಲಾ ದತ್ತ ಮಂದಿರ ನಿರ್ಮಾಣ ಮಾಡಲು 10 ರಿಂದ 15 ಲಕ್ಷ ರೂ. ವೆಚ್ಚದ ಶಿಲೆಯನ್ನು ಇಗಾಗಲೇ ಖರೀದಿಸಲಾಗಿದೆ. ಕುಮಟಾದ ಶಿಲ್ಪಿ ಸಧ್ಯ ಮಹಾರಾಷ್ಟ್ರಾದ ಕುಡಾಲ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಲ್ಪಿ ಭಾರ್ಗವ ಗುಡಿಗಾರ ದತ್ತ ಮಂದಿರದ ನಿರ್ಮಾಣ ಕಾರ್ಯದಲ್ಲಿರುತ್ತಾರೆ. ಶನಿಕತೆ ಕಾರ್ಯಕ್ರಮ ಮುಗಿದ ಬಳಿಕ ಮಂದಿರ ನಿರ್ಮಾಣ ಕಾಮಗಾರಿ ಆರಂಭಿಸಲಾಗುತ್ತದೆ. ಶಿಲ್ಪವನ್ನು ಕೆತ್ತನೆ ಮಾಡಲು ಕುಮಟಾದ ಯೋಗ್ಯ ಸ್ಥಳದಲ್ಲಿ ಜಾಗ ಗುರುತಿಸಲಾಗಿದೆ. ಮಂದಿರದ ಕಾಮಗಾರಿ ಸಂಪೂರ್ಣ ಮುಗಿಸಲು 35 ಲಕ್ಷ ರೂ. ವೆಚ್ಚದ ಅಂದಾಜು ಪತ್ರಿಕೆ ಸಿದ್ದಪಡಿಸಲಾಗಿದೆ. ಶಿಲಾ ದತ್ತಂದಿರಕ್ಕೆ ದೇಣಿಗೆ ನೀಡ ಬಯಸುವವರು ಶಿಲಾದತ್ತ ಮಂದಿರ ನಿರ್ಮಾಣ ಸಮಿತಿ ಕೆನರಾ ಬ್ಯಾಂಕ್ ಖಾತೆ ನಂ.0400101041611 ( ಐ.ಎಫ್.ಎಸ್.ಸಿ. ಕೋಡ್. 0000400) ವಂತಿಗೆಗಳನ್ನು ಜಮಾ ಮಾಡಬುಹುದು ಎಂದರು.

RELATED ARTICLES  “ಟಿ.ಎಸ್.ಎಸ್” ನಲ್ಲಿ ಫರ್ನಿಚರ್ ಮೇಳ ಉದ್ಘಾಟನೆ : ಜನವರಿ 6ರ ವರೆಗೆ ನಡೆಯಲಿದೆ ಮಾರಾಟ.

ದತ್ತಮಂದಿರ ಪ್ರತಿಷ್ಠಾನದ ಕಾರ್ಯದರ್ಶಿ ದತ್ತಾತ್ರಯ ಭಟ್ಟ ಮಾತನಾಡಿ,  ವೈಯಕ್ತಿಕವಾಗಿ ಶನಿಕತೆ ಮಾಡುವುದಕ್ಕಿಂತ ಸಾಮೂಹಿಕವಾಗಿ ಮಾಡಿದರೆ ಅದರ ಫಲ ಇನ್ನೂ ಅಧಿಕವಾಗಿರುತ್ತದೆ. ಕಳೆದ ವರ್ಷ ಕಾರ್ಯಕ್ರಮದಲ್ಲಿ ಉಳಿದ 77612 ರೂಪಾಯಿಯನ್ನು ದತ್ತಮಂದಿರ ನಿರ್ಮಾಣಕ್ಕೆ ವಿನಿಯೋಗಿಸಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದತ್ತಮಂದಿರ ಪ್ರತಿಷ್ಠಾನದ ಸದಸ್ಯರಾದ ರಾಮರಾಯ ಕಾಮತ್, ರಾಮಚಂದ್ರ ಗಂಗೆಮನೆ, ರಮೇಶ ಹೊನ್ನಾವರ ಉಪಸ್ಥಿತರಿದ್ದರು.