ಶಿರಸಿ : ನಗರದ ಸಿಪಿ ಬಜಾರ್ ನ ಬಣ್ಣದ ಮಠ ಕಾಂಪ್ಲೆಕ್ಸ್ ನಲ್ಲಿರುವ ರತ್ನದೀಪ ಜುವೆಲ್ಲರ್ ಗೆ ದಿನಾಂಕ 17-09-2021 ಸಂಜೆ 7.15ರ ಸುಮಾರಿಗೆ  ಗ್ರಾಹಕರ ಸೋಗಿನಲ್ಲಿ ಬಂದು ಕಳ್ಳತನ ಮಾಡಿ ಪರಾರಿಯಾಗಿದ್ದವರನ್ನು  ಪೊಲೀಸರು ಪತ್ತೆಹಚ್ಚಿ ಅವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
  ಈ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಆರೋಪಿಗಳಾದ ನೀಲೇಶ್ ರೇವಣಕರ್ (32) ಹಾಗೂ  ರಾಘವೇಂದ್ರ ದೈವಜ್ಞ (35)  ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು 1,06,672 ರೂ. ಮೌಲ್ಯದ 22.28 ಗ್ರಾಮ್ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

RELATED ARTICLES  ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸಿವಿಎಸ್‌ಕೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ