ಹೊನ್ನಾವರ: ಸಾರ್ವಜನಿಕ ಸ್ಥಳದಲ್ಲಿ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಅಂದರ್-ಬಾಹರ್ ಜೂಗಾರಾಟವನ್ನು ಆಡುತ್ತಿದ್ದಾಗ ತಾಲೂಕಿನ ಕೋಟೆಬೈಲ್ ಕೆಂಚಗಾರ ಬಸ್ ನಿಲ್ದಾಣದ ಹತ್ತಿರದ ದಾಳಿ ನಡೆಸಿದ ಹೊನ್ನಾವರ ಪೋಲಿಸರು ಹಲವರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ನಗದು ಹಣ 15,200/- ರೂಪಾಯಿ, ಜೂಜಾಟಕ್ಕೆ ಬಳಸಿದ ಪರಿಕರವನ್ನು ವಶಕ್ಕೆ ಪಡೆಯಲಾಗಿದೆ.
ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಅಂದರ್-ಬಾಹರ್ ಜೂಗಾರಾಟವನ್ನು ಆಡುತ್ತಿದ್ದವರು ಎನ್ನಲಾದ ಸುಬ್ರಹ್ಮಣ್ಯ ಶಿವಾ ಆಚಾರಿ, ಹಡಿನಬಾಳ, ರೋಹನ್ ಕೋಸ್ತಾ ಫರ್ನಾಂಡಿಸ್ ಗುಂಡಬಾಳ, ಸತೀಶ ರಾಮಾ ನಾಯ್ಕ,ಕೆಂಚಗಾರ, ಸುಭ್ರಾಯ ಮಂಜು ನಾಯ್ಕ ಕಡಗೇರಿ, ಶ್ರೀಧರ ಶಿವಾ ನಾಯ್ಕ, ಜನಕಡಕಲ್, ಮಂಜುನಾಥ ಮಾಸ್ತಿ ನಾಯ್ಕ, ಕೆಂಚಗಾರ, ಇವರನ್ನು ಬಂಧಿಸಿಲಾಗಿದೆ ಎಂದು ಪೊಲೀಸ್ ಮಾಹಿತಿ ಲಭ್ಯವಾಗಿದೆ.
ದಾಳಿ ವೇಳೆ ಕೆಲವರು ಪೊಲೀಸರ ಕಣ್ಣು ತಪ್ಪಿಸಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು ಅವರ ಬಂಧನಕ್ಕೆ ಪೊಲೀಸ್ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ. ಈ ಸಂಭದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.