ಶಿರಸಿ:ಮಮನೆಯ ಹಿಂಬದಿಯ ಕೊಟಡಿಯಲ್ಲಿ ಅಕ್ರಮವಾಗಿ ಎಮ್ಮೆಯನ್ನು ಕಡಿದು ಮಾಂಸ ಮಾಡುತ್ತಿರುವ ಸಂಧರ್ಭದಲ್ಲಿ ಖಚಿತ ಮಾಹಿತಿಯ ಮೇಲೆ ದಾಳಿ ನಡೆದಿಸಿ ಪೋಲೀಸರು ಆರು ಜನ ಆರೋಪಿಗಳನ್ನು ಬಮನದಿಸಿದ ಘಟನೆ ತಾಲೂಕಿನ ಇಟಗುಳಿ ಗ್ರಾಮದ ಕಲ್ಕೊಪ್ಪಮಜರೆಯಲ್ಲಿ ನಡೆದಿದೆ. ನಜಿರ ಅಹಮದಗ ಅಬ್ದುಲ್ ವಾಹಿದ್ ಸಾಬ್ ಎಂಬುವವರ ಮನೆಯ ಹಿಂಬದಿ ಕೊಟಡಿಯಲ್ಲಿ ಎಮ್ಮೆಯನ್ನು ಕಡಿಯಲಾಗಿತ್ತು ಎಂದು ತಿಳಿದುಬಂದಿದೆ.
ನಜೀರ್ ಅಹಮದ್ ಅಬ್ದುಲ್ ವಾಹಿದ್ ಸಾಬ್, ಅಬ್ದುಲ್ ಮಜಿದ್ ಅಬ್ದುಲ್ ಜಲೀಲ್ ಸಾಬ್, ರಿಯಾಜ್ ಅಹ್ಮದ್ ನಜೀರ್ ಮಹಮ್ಮದ್ ಸಾಬ್, ಹಭೀಬ ರೆಹಮಾನ್ ಮಹಮ್ಮದ್ ಸಾಬ್,ಅನ್ಸಾರ್ ನಜೀರ್ ಮಹಮ್ಮದ್ ಸಾಬ್,ಅಬ್ದುಲ್ ಶುಕೂರ್ ಇಸ್ಮಾಯಿಲ್ ಸಾಬ್ ಬಂದಿತ ಆರೋಪಿಗಳು.
ಆರೋಪಿಗಳು ಎಲ್ಲರು ಇಟಗುಳಿ ಗ್ರಾಮದ ಕಲ್ಕೊಪ್ಪ ಮಜಿರೆ ಯಲ್ಲಿ ವಾಸವಾಗಿರುವವರು ಎಂದು ಗುರುತಿಸಲಾಗಿದೆ.
ಪೊಲೀಸರು ಆರೋಪಿತ ರಿಂದ ಒಟ್ಟು 90 ಕೆಜಿ 64 ಗ್ರಾಂ ಎಮ್ಮೆಯ ಮಾಂಸವನ್ನು, ಚೂರಿ 1, ಡ್ರ್ಯಾಗರ್ 1, ತೂಕಮಾಡುವ ತೂಕದ ಯಂತ್ರ ಇತ್ಯಾದಿ ಸೇರಿದಂತೆ ಸುಮಾರು 20,410/-ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಕ್ಕೆಪಡೆದು ಕೊಂಡಿರುತ್ತಾರೆ, ಈ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 20 20 ಮತ್ತು ಕಲಂ 149 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿ ತನಿಖೆ ಯನ್ನು ಕೈಗೊಂಡಿದ್ದಾರೆ.
ರವಿ ಡಿ ನಾಯ್ಕ ಶಿರಸಿ ಉಪವಿಭಾಗ,ಶಿರಸಿ ವೃತ್ತ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್ ಇವರ ಮಾರ್ಗದರ್ಶನದಲ್ಲಿ ಶಿರಶಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಈರಯ್ಯ ಡಿಎನ್ ರವರ ನೇತೃತ್ವದಲ್ಲಿ ಎಎಸ್ಐ ರಮೇಶ್ ನಾಯಕ್ ಸಿಬ್ಬಂದಿಗಳಾದ ಮಹಾದೇವ ನಾಯ್ಕ, ಪ್ರದೀಪ್ ರೇವಣಕರ್, ಗಣಪತಿ ನಾಯ್ಕ, ಚೇತನ್ ಜೆಎನ್, ಮಹದೇವ್ ನೀರೊಳ್ಳಿ, ಯಲ್ಲಪ್ಪ ಪೂಜಾರಿ, ಸುನಿಲ್ ಹಡಲಗಿ, ರಾವ್ ಸಾಹೇಬ್ ಕಿತ್ತೂರ್, ರಮೇಶ್ ಮುಚ್ಚಂಡಿ, ಲಕ್ಷ್ಮಪ್ಪ ವಾಲಿಕರ್ ಇವರು ದಾಳಿ ಮಾಡಿ ಆರೋಪಿತರನ್ನು ಬಂದಿಸಿರುತ್ತಾರೆ. ಈ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರು ಪ್ರಶಂಶೆ ವ್ಯಕ್ತಪಡಿಸಿರುತ್ತಾರೆ.