ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್(ರಿ ) ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಮಿರ್ಜಾನ್ ಕುಮಟಾದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯೆ ಯಾದ ಶ್ರೀಮತಿ ಲೀನಾ ಗೊನೆಹಳ್ಳಿಯವರು ಗಾಂಧೀಜಿಯವರ ತತ್ವ ಆದರ್ಶಗಳ ಬಗ್ಗೆ, ಶಾಸ್ತ್ರೀಜಿಯವರ ಪ್ರಾಮಾಣಿಕತೆ ನಿಷ್ಠೆಯ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳೆಲ್ಲರೂ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದರು.

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್ ಇಲ್ಲಿದೆ

ವಿದ್ಯಾರ್ಥಿನಿಯಾದ ಕುಮಾರಿ ಶ್ರೀಶ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದಳು. ಕುಮಾರಿ ಸಂಜನಾ ಪಟಗಾರ ಸ್ವಾಗತಿಸಿದಳು. ವಿದೂಷಿ ಶ್ರೀಮತಿ ರಂಜನ ಆಚಾರ್ಯ ಹಾಗೂ ಸಂಗಡಿಗರು ಭಜನೆಯನ್ನು ಮಾಡಿದರು. ವಿದ್ಯಾರ್ಥಿನಿ ಮೈಥಿಲಿ ಹಾಗೂ ಸಂಗಡಿಗರು ಗಾಂಧೀಜಿಯವರ ಕುರಿತಾದ ಕಿರು ನಾಟಕವನ್ನು ಪ್ರದರ್ಶಿಸಿದರು. ಸಭಾ ಕಾರ್ಯಕ್ರಮದ ವಂದನಾರ್ಪಣೆಯನ್ನು ಕುಮಾರ್ ಅಕ್ಷಯ್ ಪಟಗಾರ ನೆರವೇರಿಸಿಕೊಟ್ಟರು. ಕಾರ್ಯಕ್ರಮದ ನಂತರದಲ್ಲಿ ಶ್ರಮ ದಾನ ಕಾರ್ಯಕ್ರಮ ಹಾಗೂ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

RELATED ARTICLES  ಕರೋನಾ ವೈರಸ್ ಹಾಗೂ ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ಕುರಿತಾಗಿ ಜಾಗೃತಿ ಕಾರ್ಯಕ್ರಮ

ವರದಿ : ರಮೇಶ ನಾಯ್ಕ