ಕುಮಟಾ: ರಾಷ್ಟ್ರೀಯ ಹೆದ್ದಾರಿ 66 ರ ಗಿಬ್ ಹೈಸ್ಕೂಲ್ ಸಮೀಪ ಸಿನಿಮೀಯ ರೀತಿಯಲ್ಲಿ ಟಿಪ್ಪರೊಂದು ಉರುಳಿಬಿದ್ದ ಘಟನೆ ನಡೆದಿದೆ. ಸ್ಟೇರಿಂಗ್ ಲಾಕ್ ಆದ ಪರಿಣಾಮ ಚಲಿಸುತ್ತಿದ್ದ ಲಾರಿ ಪಲ್ಟಿಯಾದ ವೇಳೆ ರಸ್ತೆ ಬದಿಯಲ್ಲಿ ಸೈಕಲ್ ನಿಲ್ಲಿಸಿ ಮಾತಾಡುತ್ತಿದ್ದ ಇಬ್ಬರು ಉರುಳಿ ಬೀಳುತ್ತಿರುವ ಟಿಪ್ಪರ್ ಅಡಿಯಲ್ಲಿ ಸಿಲುಕಿದ್ದರು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಟಿಪ್ಪರ್ ಉರುಳುತ್ತಿರುವಾಗ ಸೈಕಲ್ ನಿಲ್ಲಿಸಿ ಮಾತನಾಡುತ್ತಿದ್ದ ಇಬ್ಬರೂ ಅಲ್ಲೇ ಮಲಗಿ, ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಟಿಪ್ಪರ್ ಉರುಳುತ್ತಿರುವಂತೆ ಅದರ ಚಕ್ರ ಹಾಗು ಇಂಜಿನ್ ನಡುವಿನ ಗ್ಯಾಪಿನಲ್ಲಿ ಉರುಳುತ್ತಾ ಕೆಳಗಿನ ಗಟಾರಕ್ಕೆ ಜಿಗಿದು, ಜೀವ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ದೃಷ್ಯ ನೋಡುತ್ತಿದ್ದವರು ಕಂಗಾಲಾಗಿ ಅವರನ್ನು ನೋಡಿ ಮೂಕ ವಿಸ್ಮಿತರಾದರು ಎಂದು ತಿಳಿಸಿದ್ದಾರೆ.
ಲಾರಿ ಉರುಳುತ್ತಿದ್ದ ಕೂಡಲೇ ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ಇವರನ್ನು ಹೊರಗೆ ತೆಗೆದು ಜೀವ ಉಳಿಸಿದ್ದಾರೆ. ಟಿಪ್ಪರ್ ಉರುಳಿ ಮರಕ್ಕೆ ಬಡಿದು ನಿಂತಿದ್ದು, ಲಾರಿಯ ಚಾಲಕ ಸಹ ಅದೃಷ್ಟವಶಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಹಿತಿ ತಿಳಿದ ಕುಮಟಾ ಪಿಎಸ್‌ಐ ಆನಂದ ಮೂರ್ತಿ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.