ಅಕ್ಟೋಬರ್ ೨ ರಂದು ಕುಮಟಾದ ಬಿಜೆಪಿ ಮಂಡಲದ ವತಿಯಿಂದ ಮಹಾತ್ಮಾಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನದ ಅಂಗವಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಮುಂಜಾನೆ ತಾಲೂಕಿನ ಪ್ರತೀಗ್ರಾಮದಲ್ಲೂ ಭೂತ್ ಮಟ್ಟದಲ್ಲಿ ಸ್ವಚ್ಛತಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾತ್ತು.
ಕುಮಟಾನಗರದಲ್ಲಿ ಗಾಂಧೀ ಚೌಕದ ಬಳಿ ಗಾಂಧೀಜಿಯವರ ಭಾವಚಿತ್ರಕ್ಕೆ ಶಾಸಕರಾದ ದಿನಕರ ಶೆಟ್ಟಿ ಅವರ ನೇತ್ರತ್ವದಲ್ಲಿ ಪುಷ್ಪಾರ್ಚನೆಯನ್ನು ಮಾಡಲಾಯಿತು ನಂತರ ಪಕ್ಷದ ಕಾರ್ಯಾಲಯದಲ್ಲಿ ಸಭಾಕಾರ್ಯಕ್ರಮವನ್ನು ನೆಡಸಲಾಯಿತು.ವಕ್ತಾರರಾದ ಕಾಗಾಲ ಚಿದಾನಂದ ಭಂಡಾರಿ ಅವರು ಗಾಂಧೀ ಹಾಗೂ ಶಾಸ್ತ್ರೀ ಅವರ ಕೊಡುಗೆಗಳನ್ನು ಸ್ಮರಿಸಿದರು.ಸಭಾಧ್ಯಕ್ಷತೆಯನ್ನು ಮಂಡಲಾಧ್ಯಕ್ಷ ಹೇಮಂತ ಗಾಂವ್ಕರ್ ಅವರು ವಹಿಸಿದ್ದರು.ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಜಿಲ್ಲಾ ಕಾರ್ಯದರ್ಶಿ ಪ್ರಶಾಂತ ನಾಯ್ಕ,ಪುರಸಭಾ ಅಧ್ಯಕ್ಷೆ ಮೋಹಿನಿಗೌಡ ವೇದಿಕೆಮೇಲೆ ಹಿರಿಯರಾದ ಗಜಾನನ ಗುನಗಾ ಉಪಸ್ಥಿತರಿದ್ದರು.ಬಳಿಕ ಎಲ್ಲಾ ಕಾರ್ಯಕರ್ತರೂ ಖಾದಿ ಮಳಿಗೆಗೆ ತೆರಳಿ ಖಾದಿ ವಸ್ತ್ರಗಳನ್ನು ಖರೀದಿಸಿದರು.
ಅಪರಾಹ್ನ ನೆಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಬಾಡ ಕಾಗಾಲ ವ್ಯಾಪ್ತಿಯಲ್ಲಿ ಖಾದಿ ವಸ್ತ್ರದ ನೇಕಾರಿಕೆಯನ್ನು ಮಾಡುತ್ತಿದ್ದ ಐದು ಮಂದಿಯನ್ನು ಸನ್ಮಾನಿಸಲಾಯಿತು.ಹಿರಿಯನೇಕಾರರಾದ ರಾಮ ನಾಯ್ಕ,ರಾಮಕೃಷ್ಣ ನಾಯ್ಕ,ನಾಗೇಶ ಬಳಗು ದೇವಿದಾಸ ನಾಯ್ಕ , ಪರಮೇಶ್ವರ ನಾಯ್ಕ ಇವರುಗಳು ಪಕ್ಷದ ವತಿಯಿಂದ ಸನ್ಮಾನವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ವಿನೋದ ಪ್ರಭು. ಹೇಮಂತಕುಮಾರ ಗಾಂವ್ಕರ್ ಪುರಸಭೆ ಉಪಾಧ್ಯಕ್ಷೆ ಮೋಹಿನಿ ಗೌಡ ಪ್ರಸಾದ್ ನಾಯ್ಕ್ ನಗರಸಭಾಧ್ಯಕ್ಷ .ಮಂಡಲ ಪ್ರಧಾನಕಾರ್ಯದರ್ಶಿ ಜಿ ಹೆಗ್ಡೆ ವಿನಯ್ ನಾಯ್ಕ ವಿಶ್ವನಾಥ ನಾಯ್ಕ ಜಯಾ ಶೇಟ್ ಗೌರಿ ವೈದ್ಯ ವಿಠ್ಠಲ್ ನಾಯ್ಕ ಹರೀಶ್ ನಾಯ್ಕ್ ಬಿಡಿ ಪಟ್ಗಾರ್ ತಿಮ್ಮಪ್ಪ ಮುಕ್ರಿ. ಕುಮಾರ್ ಮಾರ್ಕಂಡೇಯ ಸ್ಥಳಿಯ ಭೂತ ಅಧ್ಯಕ್ಷರಾದ ಶ್ರೀನಿವಾಸ್ ನಾಯ್ಕ ಸ್ಥಳೀಯ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಹೊಲನಗದ್ದೆ ಪಂಚಾಯತ್ ಸದಸ್ಯರು ಹಾಜರಿದ್ದರು