ಕಾರವಾರ : ಸ್ನೇಹಿತರ ಜೊತೆಗೆ ಪಿಕ್ ನಿಕ್ ಗೆ ಬಂದಿದ್ದ ನೌಕಾನೆಲೆ ಸಿಬ್ಬಂದಿಯೊಬ್ಬರು ಮೃತಪಟ್ಟ ಘಟನೆ ನಡೆದಿರುವ ಬಗ್ಗೆ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ದೇವಳಮಕ್ಕಿಗ್ರಾಮದ ಶಿರ್ವೆ ಬಳಿಯ ಹಳ್ಳದಲ್ಲಿ ಕಾಲು ಜಾರಿ ಬಿದ್ದು ನೌಕಾನೆಲೆ ಸಿಬ್ಬಂದಿಯೊಬ್ಬರು ಮೃತಪಟ್ಟ ಘಟನೆ ನಡೆದಿದ್ದು ಮಲ್ಲಾಪುರ
ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿ ಪ್ರಕರಣ
ದಾಖಲಾಗಿದೆ ಎನ್ನಲಾಗಿದೆ.
ಮೂಲತಃ ದೇವಳಮಕ್ಕಿನಿವಾಸಿ ಕೃಷ್ಣಶಂಕರ್ ನಾಯ್ಕ (35) ನೀರಿನಲ್ಲಿ ಬಿದ್ದು ಮೃತಪಟ್ಟ ವ್ಯಕ್ತಿ. ಶಿರ್ವೆಯ ಹಳ್ಳದ ಬಳಿ ತನ್ನ 20 ಸ್ನೇಹಿತರೊಂದಿಗೆ ಪಿಕ್ ನಿಕ್ ಗಾಗಿ ತೆರಳಿದ್ದ. ಈ ಸಂದರ್ಭದಲ್ಲಿ ಊಟ ಮಾಡಿ ಕೈತೊಳೆಯಲು ಹಳ್ಳದ ಬಳಿ ತೆರಳಿದ್ದಾಗ, ಆಕಸ್ಮಿಕವಾಗಿ ಕಾಲು ಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಅಣ್ಣಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Leave a Reply