ಕುಮಟಾ : ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡುವುದು ಸಾಮಾನ್ಯ ಆದರೆ ಮೂರು ಮಕ್ಕಳಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ. ಮಹಿಳೆಯೋರ್ವಳು ಅವಧಿ ಪೂರ್ವವೇ ತ್ರಿವಳಿ ಮಕ್ಕಳಿಗೆ ಸಹಜ ಹೆರಿಗೆ ಮೂಲಕ ಜನ್ಮ ನೀಡಿರುವ ಅಪರೂಪದ ಘಟನೆ ಕುಮಟಾದ ಪಟ್ಟಣದ ಡಾ. ಜಾನು ಮಣಕಿಕರ್ಸ್ ಮೆಟರ್​​​ನಿಟಿ ಮತ್ತು ನರ್ಸಿಂಗ್ ಹೋಮ್‍ನಲ್ಲಿ ನಡೆದಿದೆ.

ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ. ಗೋಕರ್ಣದ ಗಂಗಾವಳಿ ನಿವಾಸಿ ಹಲೀಮಾ ಸಾಧಿಕ್ ಸಾಬ್ ಎಂಬುವರಿಗೆ 7ನೇ ತಿಂಗಳಿನಲ್ಲೇ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ, ದಾಖಲಿಸಲಾಗಿತ್ತು. ಗರ್ಭಿಣಿಯನ್ನು ಪರೀಕ್ಷಿಸಿದ ವೈದ್ಯ ಡಾ. ಪ್ರಶಾಂತ ಮಣಕಿಕರ್ ಹೆರಿಗೆ ಮಾಡಿಸುವ ಬಗ್ಗೆ ತಿಳಿಸಿದ್ದರು.‌

RELATED ARTICLES  ಸನದಿ ಕಾವ್ಯ ಪ್ರಶಸ್ತಿಗೆ ಗೀತಾ ಸಂದಿಗೋಡಮಠ ಆಯ್ಕೆ

ಅದರಂತೆ ಸುರಕ್ಷಿತ ಮತ್ತು ಯಶಸ್ವಿಯಾಗಿ ನಾರ್ಮಲ್​​ ಹೆರಿಗೆ ಮಾಡಿಸಲಾಗಿದ್ದು, ಹಲೀಮಾ ಸಾದಿಕ್ ಸಾಬ್ ಅವರು ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮೂರೂ ಶಿಶುಗಳು ಆರೋಗ್ಯವಾಗಿವೆ. ಆದರೂ ಕೂಡ ಶಿಶುಗಳ ಸಂಪೂರ್ಣ ಬೆಳವಣಿಗೆಯಾಗದ ಕಾರಣ ಅವುಗಳ ಆರೋಗ್ಯ ಸುರಕ್ಷತಾ ದೃಷ್ಟಿಯಿಂದ ಮಣಿಪಾಲ ಆಸ್ಪತ್ರೆಯ ಶಿಶು ಸುರಕ್ಷತಾ ಕೇಂದ್ರದಲ್ಲಿ ಇರಿಸಲಾಗಿದೆ.

RELATED ARTICLES  ಸಂದಿತು ಶಕ್ತಿ ದೇವತೆಗೆ ಪೂಜೆ, ಸಂಪನ್ನವಾಯ್ತು ಕದ್ರಾ ಜಾತ್ರೆ!

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ಪ್ರಶಾಂತ ಮಣಕಿಕರ್ ತಮ್ಮ ಆಸ್ಪತ್ರೆಯಲ್ಲಿ ಇದೇ ಮೊದಲು ತ್ರಿವಳಿ ಮಕ್ಕಳಿಗೆ ಮಹಿಳೆ ಜನ್ಮ ನೀಡಿದ ಘಟನೆ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹೆರಿಗೆ ಸಮಯದಲ್ಲಿ ಯಾವುದೇ ತೊಂದರೆಯಾಗಿಲ್ಲ, ಎಲ್ಲಾ ಸುಸೂತ್ರವಾಗಿ ನಾರ್ಮಲ್​ ಹೆರಿಗೆ ಆಗಿದೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.