ಕುಮಟಾ : ತಾಲೂಕಿನ ಕಡ್ಲೆ ತೀರಕ್ಕೆ ಮೂರಿಯಾ ಮೀನಿನ ಕಳೆಬರ ಪತ್ತೆಯಾಗಿದೆ. ಈ ಮೀನು ಸುಮಾರು ೧.೫ಯಿಂದ ೨ ಮೀಟರ್‌ ಉದ್ದ ೨೦ ಕೆಜಿ ತೂಕ ಇರಬಹುದು ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಈ ಮೀನು ಸಮುದ್ರದಲ್ಲಿ ಬಂಡೆಯ ಮಧ್ಯದಲ್ಲಿ ಇರುತ್ತದೆ.ಅರಬ್ಬೀ ಸಮುದ್ರದ ಆಳದಲ್ಲಿ ದ್ವಿಪದ ಬಂಡೆಯ ಮಧ್ಯ ಹೆಚ್ಚಾಗಿ ಕಂಡುಬರುತ್ತದೆ ಎಂದು ಮೀನುಗಾರರು ಮಾಹಿತಿ ನೀಡಿದ್ದಾರೆ.

ಮೇಲಿಂದ ಮೇಲೆ ಚಂಡಮಾರುತ ಅಪ್ಪಳಿಸುವುದರಿಂದ ಈ ಮೀನಿನ ವಾಸಸ್ಥಳಕ್ಕೆ ಧಕ್ಕೆಯಾಗುವುದು ಒಂದುಕಡೆಯಾದರೆ ವಿಪರೀತ ಆಮ್ಲಜನಕದ ಕೊರತೆ ಉಂಟಾಗಿ ಇಂತಹ ಜಲಚರ ಸಾವಿಗೀಡಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಮಿತಿಗಿಂತ ಹೆಚ್ಚು ಮೀನುಗಾರಕಾ ಬೋಟಿಗೆ ಪರವಾನಗಿ ನೀಡುವುದರಿಂದ ಜಲಚರಗಳಿಗೆ ಆಮ್ಲಜನಕದ ಕೊರತೆ ಅರಬ್ಬಿ ಸಮುದ್ರದಲ್ಲಿ ಸಂಭವಿಸುತ್ತಿರಬಹುದು. ಬೋಟಗಳಿಂದ ಸೋರುವ ಇಂಜಿನ್‌ ತೈಲ,ಡಿಸೇಲ್‌ಗಳಿಂದಲೂ ನೀರು ಕಲುಷಿತವಾಗುತ್ತಿದೆ.
ಇತ್ತೀಚಿನ ದಿನದಲ್ಲಿ ಹೆಚ್ಚಿನ ದೋಣಿಗಳು ಯಾಂತ್ರೀಕೃತವಾಗಿರುವುದರಿಂದ ಸೋರುವ ತೈಲಗಳು ಸಮುದ್ರದ ಅಡಿಯಲ್ಲಿರುವ ಬಂಡೆಗೆ ಅಂಟಿಕೊಳ್ಳಲಿದೆ. ಇಲ್ಲಿಯೇ ಹೆಚ್ಚಾಗಿ ವಾಸಿಸುವ ಮೂರಿಯಾ ಮೀನು ಚಂಡಮಾರುತದ ಸಂದರ್ಭದಲ್ಲಿ ಮತ್ತಷ್ಟು ತೊಂದರೆಗೆ ಸಿಲುಕಿ ಸಾಯುತ್ತದೆ ಎನ್ನಲಾಗಿದೆ .

RELATED ARTICLES  ಗ್ರಾಹಕರಿಗೆ ಬಿಗ್ ಶಾಕ್! : ಚಿನ್ನದ ದರ ಕಳೆದ 6 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆ.

ಪರ್ಶಿಯನ್ ಬೋಟ್ ಮೀನುಗಾರಿಕೆ ಮಾಡುವಾಗ ಆಗೊಮ್ಮೆ-ಈಗೊಮ್ಮೆ ಬಲೆಗೆ ಬೀಳುವ ಮೀನುಗಳು ಸುಮಾರು ೨ ಕ್ವಿಂಟಲ್‌ ತನಕ ತೂಕ ಇರುತ್ತದೆ. ಅತ್ಯಂತ ರುಚಿಕಟ್ಟಾಗಿರುವ ಈ ಮೀನಿನ ಮಾಂಸಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಪರೀತ ಬೇಡಿಕೆಯೂ ಇದೆ. ಸ್ಥಳೀಯವಾಗಿ ಮಾರುಕಟ್ಟೆಯಲ್ಲಿಯೆ ಈ ಮೀನಿಗೆ ಪ್ರತಿ ಕೆಜಿಗೆ ೪೦೦ ರಿಂದ ೫೦೦ ರೂ.ಗಳ ವರೆಗೆ ಇದೆ.

RELATED ARTICLES  ಗಣಪತಿ ವಿಸರ್ಜನೆ ವೇಳೆ ಯುವಕ ಸಾವು.