ಕಾರವಾರ : ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಸಮುದ್ರಕ್ಕೆ ತಿಳಿಯುವವರಿಗೆ ಕಟ್ಟೆಚ್ಚರ ನೀಡುತ್ತಿದ್ದು, ಸಮುದ್ರದಲ್ಲಿ ಸಂಭವಿಸುವ ಅವಘಡಗಳ ತಡೆಗೆ ಪ್ರಯತ್ನ ನಡೆಸುತ್ತಿದೆ. ಆದರೆ ಪ್ರವಾಸಿಗರು ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸಮುದ್ರಕ್ಕೆ ಇಳಿಯುತ್ತಿರುವುದು ಹಾಗೂ ಅಪಾಯಕ್ಕೆ ಸಿಲುಕಿ ಕೊಳ್ಳುತ್ತಿರುವುದು ಜಿಲ್ಲಾಡಳಿತಕ್ಕೆ ಸಾಮಾನ್ಯ ಜನರಿಗೆ ತಲೆನೋವಾಗಿ ಪರಿಣಮಿಸಿದೆ. ಪ್ರವಾಸಕ್ಕೆ ಬಂದವರು ಸಮುದ್ರಪಾಲಾಗುತ್ತಿದ್ದ ಸಂದರ್ಭದಲ್ಲಿ ಅವರನ್ನು ರಕ್ಷಿಸಿದ ಘಟನೆ ಎಂದು ವರದಿಯಾಗಿದೆ.

ನಗರದ ಅರಬ್ಬಿ ಸಮುದ್ರದಲ್ಲಿ ಈಜಲು ಇಳಿದ ಅಲೆಯ ರಭಸಕ್ಕೆ ಕೊಚ್ಚಿಹೋದ 6 ಮಕ್ಕಳನ್ನು ಪೊಲೀಸ್ ಹಾಗೂ ಲೈಫ್ ಗಾರ್ಡ್ ರಕ್ಷಣೆ ಮಾಡಿದ ಘಟನೆ ಸೋಮವಾರ ನಡೆದಿದೆ. ಹುಬ್ಬಳ್ಳಿಯಿಂದ 19 ಜನ ಪ್ರವಾಸಕ್ಕೆ ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರಕ್ಕೆ ಬಂದಿದ್ದರು. ಈಜಲು ಇಳಿಯದಂತೆ ಮಕ್ಕಳಿಗೆ ಪೊಲೀಸರು, ಇಲ್ಲಿರುವ ಲೈಫ್ ಗಾರ್ಡ್ ಗಳು ಎಚ್ಚರಿಕೆ ನೀಡಿದ್ದರು. ಆದರೂ ಸಮುದ್ರ ಈಜಲು ಇಳಿದ ಆರು ಮಕ್ಕಳು ಸಮುದ್ರದ ಬೃಹತ್ ಅಲೆಗೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು, ಲೈಫ್ ಗಾರ್ಡ್ಗಳು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಸ್ವರ್ಣವಲ್ಲೀ ಶ್ರೀ ಪೀಠಾರೋಹಣದ ತ್ರಿದಶಮಾನೋತ್ಸವ; ವಿದ್ಯಾಭವನ ಲೋಕಾರ್ಪಣೆ