ಸೇತುವೆಯಿಂದ ಕಾಳಿ ನದಿಗೆ ಹಾರಿ ಸಾವಿಗೆ ಶರಣಾದ ಯುವಕ

ಯುವಕನೊಬ್ಬ ಸೇತುವೆಯಿಂದ ಕಾಳಿ ನದಿಗೆ ಹಾರಿ ಸಾವಿಗೆ ಶರಣಾದ ಘಟನೆ ಕಾರವಾರದ ಕೋಡಿಭಾಗದ ಅಳ್ಳೇವಾಡದ ಬಳಿ ನಡೆದಿದೆ. ಈತ ವಿಪರೀತ ಕುಡಿತದ ಚಟಕ್ಕೆ ದಾಸನಾಗಿದ್ದ ಎನ್ನಲಾಗಿದೆ. ತಾಲೂಕಿನ ಹರಿದೇವನಗರದ ಹಜರತ್ ಸಾಬ್ (23) ಸಾವಿಗೆ ಶರಣಾದ ವ್ಯಕ್ತಿ. ಯಾವುದೋ ವಿಷಯದಿಂದ ನೊಂದ ವ್ಯಕ್ತಿ ಕಾಳಿ ಸೇತುವೆಯಿಂದ ನದಿಗೆ ಹಾರಿ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಮೃತದೇಹ ಪತ್ತೆಯಾಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಂಗಡಿಯ ಶಟರ್ಸ್ ಮುರಿದು ಕಳ್ಳತನ

ಮುಂಡಗೋಡ ನಗರದ ಶಿರಸಿ ರಸ್ತೆಯಲ್ಲಿರುವ ಹಾರ್ಡವೇರ್ ಅಂಗಡಿಯ ಶಟರ್ಸ್ ಮುರಿದು ಅಂಗಡಿಯೊಳಗಿದ್ದ ನಗದು ಹಾಗೂ ವಿವಿಧ ಪರಿಕರಗಳನ್ನು ಕಳ್ಳತನ ನಡೆಸಿದ ಘಟನೆ ನಡೆದಿದೆ. ಇಲ್ಲಿನ ಕದಂಬ ಸ್ಟೀಲ್ಸ್ & ಹಾರ್ಡ್ವೇರ್ ನಲ್ಲಿ ಕಳ್ಳತನವಾಗಿದ್ದು, ಸುಮಾರು ಹದಿನೈದು ಸಾವಿರ ರೂಪಾಯಿ ಹಾಗೂ ಆರು ಸಾವಿರ ಬೆಲೆ ಬಾಳುವ ಡಿ.ವಿ.ಆರ್. ಅನ್ನು ಕಳ್ಳರು ದೋಚಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

RELATED ARTICLES  ಶೆಟಗೇರಿಯಲ್ಲಿ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ- ಶ್ರೀವಲ್ಲಿಗೆ ಒಲಿಯಿತು ಸಮಗ್ರ ವೀರಾಗ್ರಣಿ

ಅಕ್ಟೋಬರ್ 7 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ, ಶಾಹಿನ್ ಚಂಡ ಮಾರುತದ ಪರಿಣಾಮ ಅ.7ರ ತನಕ ರಾಜ್ಯದ ಹಲವೆಡೆ ಮಳೆ ಮುಮದುವರೆಯಲಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಪ್ರಕಾರ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮುಂದಿನ ನಾಲ್ಕು ದಿನ ಮುಂದುವರೆಯಲಿದ್ದು, ಉತ್ತರ ಕನ್ನಡ ಸೇರಿ ಉಡುಪಿ, ದಕ್ಷಿಣ ಕನ್ನಡ ದಲ್ಲಿ ಇಂದಿನಿಂದ ಅಕ್ಟೋಬರ್ 7 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸೆದೆ. ಇನ್ನುಳಿದಂತೆ ಹಾಸನ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ಶಿವಮೊಗ್ಗ, ಮಂಡ್ಯ ಜಿಲ್ಲೆಗಳಲ್ಲೂ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಡಮಾರುತ ಪರಿಚಲನೆಯು ಸಮುದ್ರ ಮಟ್ಟಕ್ಕಿಂತ 4.5 ಕಿ.ಮೀ ವರೆಗೂ ವಿಸ್ತರಿಸಿದೆ.

RELATED ARTICLES  ಯಕ್ಷನಾದ ಲೀನ ಚಿಟ್ಟಾಣಿಯವರಿಗೆ ಭಾವಪೂರ್ಣ ನುಡಿ ನಮನ