ಭಟ್ಕಳ : ಪ್ರವಾಸಕ್ಕೆ ಬರುವವರು ಎಲ್ಲ ನಿಯಮಗಳನ್ನು ಮೀರಿ ಸಮುದ್ರಕ್ಕೆ ಇಳಿಯುತ್ತಿರುವವರು, ಸಾರ್ವಜನಿಕರಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಮುರ್ಡೇಶ್ವರ ಬೀಚ್ ನಲ್ಲಿ ಅಲೆಯ ರಬಸಕ್ಕೆ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿದ ಘಟನೆ ಸೋಮವಾರ ಸಾಯಂಕಾಲ ನಡೆದಿದೆ.
ಪ್ರವಾಸಿಗ ಆಂದ್ರ ಪ್ರದೇಶದ ಮೂಲದವನಾಗಿದ್ದು ಐದು ಜನ ಪ್ರವಾಸಕ್ಕೆ ಬಂದಿದ್ದರು ಎಂದು ಹೇಳಲಾಗುತ್ತಿದೆ. ಐದು ಜನರಲ್ಲಿ ಒಬ್ಬ ಪ್ರವಾಸಿಗ ಕೊಚ್ಚಿಹೋಗಿದ್ದು, ಲೈಪ್ ಗಾರ್ಡಗಳ ಸಮಯ ಪ್ರಜ್ನೆಯಿಂದ ನಿನ್ನೆ ಒಂದು ಜೀವ ಉಳಿದಂತಾಗಿದೆ. ಲೈಫ್ ಗಾರ್ಡಗಳ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.