ಸಿದ್ದಾಪುರ : ತನ್ನ ತೊದಲು ನುಡಿಗಳ ಮೂಲಕವೇ ಸಾಮಾನ್ಯ ವಿಷಯಗಳ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಪಟಪಟನೆ ನುಡಿ ಮುತ್ತುಗಳನ್ನು ಉದುರಿಸುವ ಪುಟಾಣಿ ತ್ರಿಶಿಕಾಳಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು 2021 ನೇ ಸಾಲಿನ ಪ್ರಶಸ್ತಿ ಹಾಗೂ ಪದಕವನ್ನು ನೀಡಿ ಗೌರವಿಸಿದೆ.

ತಾಲೂಕಿನ ಚಿನ್ನದ ಉದ್ಯಮಿಗಳಾದ ಪ್ರಸನ್ನ ಜ್ಯೂವೆಲಸ್೯ನ ಸುಶಾಂತ್ ಶೇಟ್ ಮತ್ತು ನಂದಿನಿ ಶೇಟ್ ದಂಪತಿಗಳ ಕೇವಲ 2 ವಷ೯ 8 ತಿಂಗಳ ಪುಟಾಣಿ ಪೋರಿ ತ್ರಿಶಿಕಾ ಶೇಟ್ ತನ್ನ ಅಸಾಧಾರಣ ನೆನಪಿನ ಶಕ್ತಿಯ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾಡ್೯ ದಾಖಲೆಯಲ್ಲಿ ಸೇಪ೯ಡೆಯಾಗಿದ್ದಾಳೆ.

RELATED ARTICLES  ಕುಮಟಾದಲ್ಲಿ ಉತ್ತರಕನ್ನಡ ಉಳಿಸಿ ಸಮಿತಿಯ ಮೊದಲ ಸಭೆ : ಶರಾವತಿ, ಅಘನಾಶಿನಿ ರಕ್ಷಣೆಗೆ ಪಣ.

ದೇಶ ಹಾಗೂ ರಾಜ್ಯಕ್ಕೆ ಸಂಬಂಧಪಟ್ಟ ಹಲವು ಮಾಹಿತಿಗಳ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ವಣ೯ಮಾಲೆ, ಇಂಗ್ಲಿಷ್ ವಣ೯ಮಾಲೆಯ ಎ ಯಿಂದ ಜೆಡ್ ವರೆಗಿನ ಪ್ರತಿ ಅಕ್ಷರಗಳ ಪದ ಜೋಡಣೆ, 1ರಿಂದ 20ವರೆಗಿನ ಸಂಖ್ಯೆ ಹೇಳುವುದು, ಮನುಷ್ಯನ ದೇಹದ 18 ಅಂಗಾಂಗಗಳ ಹೆಸರು, ಬಣ್ಣಗಳನ್ನು ಗುರುತು ಹಿಡಿಯುವುದು, ಸೂಯ೯ ನಮಸ್ಕಾರ, ಶಾಸ್ತ್ರದ 8 ಮಂತ್ರಗಳು, ಕಾಮನ ಬಿಲ್ಲಿನ ಬಣ್ಣವನ್ನು ಹೇಳುವುದು, ಪಂಚೇಂದ್ರಿಯಗಳು, ವಾರಗಳು, ಮಾಸಗಳು, ದಿಕ್ಕುಗಳು, ಋತುಗಳು, ಸೂಯ೯ಮಂಡಲದ ಗ್ರಹಗಳ ಹೆಸರು, ತಿಥಿಗಳು, ಕಾಲಗಳು ಸೇರಿದಂತೆ ಸಾಮಾನ್ಯ ಜ್ಞಾನದ ಬಗ್ಗೆ ಅಗಾಧವಾದ ಜ್ಞಾಪಕ ಶಕ್ತಿ ಹೊಂದಿರುವ ತ್ರಿಶಿಕಾ ಎಲ್ಲವನ್ನೂ ಹೇಳುತ್ತಾಳೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ ನ ದಾಖಲೆಯಲ್ಲಿ ಸೇಪ೯ಡೆಯಾದ ಕುಮಾರಿ ತ್ರಿಶಿಕಾ ಸಾಧನೆಗೆ ಕುಟುಂಬದವರು ಹಾಗೂ ಊರಿನವರು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES  ವಾಯುಸೇನಾ ಮುಖ್ಯಸ್ಥರಿದ್ದ ಹೆಲಿಕಾಪ್ಟರ್‌ ಪತನ..!