ಕುಮಟಾ : ತಾಲೂಕಿನ ಅಘನಾಶಿನಿ ನದಿಯಲ್ಲಿ ಚಿಪ್ಪು ತಗೆದು ಗಣಿಗಾರಿಕೆ ಮಾಡುವುದರಿಂದ ಸ್ಥಳೀಯ ಸಾಂಪ್ರದಾಯಿಕ ಮೀನುಗಾರರಿಗೆ ಹಾಗೂ ಪರಿಸರಕ್ಕೆ ಆಗುವ ಹಾನಿ ತಡೆಯುವ ದ್ರಷ್ಟಿ ಯಿಂದ ಶಾಶ್ವತವಾಗಿ ಗಣಿಗಾರಿಗೆ ನಿಲ್ಲಿಸುವ ಕುರಿತು ಇಂದು ಮಾನ್ಯ ಗಣಿ ಮತ್ತು ಭೂವಿಜ್ಞಾನ ಸಚಿವರಾದ ಶ್ರೀ ಹಾಲಪ್ಪ ಆಚಾರ್ ಹಾಗೂ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಅರಬೈಲ್ ಶಿವರಾಂ ಹೆಬ್ಬಾರರವರಿಗೆ ಶಾಸಕ ದಿನಕರ ಶೆಟ್ಟಿ ಮನವಿ ಮಾಡಿದ್ದಾರೆ.
ಪ್ರಾಕೃತಿಕ ಸೌಂದರ್ಯಕ್ಕೆ ಹಾನಿ ಹಾಗೂ ಮೀನುಗಾರರ ಜೀವನಾಧಾರವಾಗಿದ್ದ ಅಘನಾಶಿನಿ ನದಿಯಲ್ಲಿ ಉತ್ತರವಾಗಿ ಚಿಪ್ಪು ತೆಗೆದು ಗಣಿಗಾರಿಕೆ ಮಾಡುವುದರಿಂದ ಸ್ಥಳೀಯ ಮೀನುಗಾರರಿಗೆ ಹಾಗೂ ಸಾಂಪ್ರದಾಯಿಕವಾಗಿ ಮೀನುಗಾರಿಕೆಯನ್ನು ನಂಬಿಕೊಂಡು ಬಂದ ಜನರಿಗೆ ಸಮಸ್ಯೆಯಾಗುತ್ತಿತ್ತು ಎನ್ನುವ ಮಾತುಗಳು ಆಗಾಗ ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಶಾಸಕರು ಇಂದು ಗಣಿ ಮತ್ತು ಭೂವಿಜ್ಞಾನ ಸಚಿವರಾದ ಶ್ರೀ ಹಾಲಪ್ಪ ಆಚಾರ್ ಹಾಗೂ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಅರಬೈಲ್ ಶಿವರಾಂ ಹೆಬ್ಬಾರರವರಿಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಕಳೆದ ಅನೇಕ ದಿನಗಳ ಹಿಂದೆ ಸಾಂಪ್ರದಾಯಿಕವಾಗಿ ಮೀನುಗಾರಿಕೆ ನಡೆಸುವ ಮೀನುಗಾರ ಕುಟುಂಬಗಳು ಹಾಗೂ ಮೀನುಗಾರ ಪ್ರಮುಖರು ಶಾಸಕರಿಗೆ ವಿಷಯ ಮನವರಿಕೆ ಮಾಡಿದ್ದರು. ಶಾಸಕರಿಗೆ ಕ್ರಮಕೈಗೊಳ್ಳುವಂತೆ ವಿನಂತಿಸಿದ್ದರು. ಶಾಸಕರು ಈ ಕುರಿತು ಸಚಿವರ ಗಮನ ಸೆಳೆದಿದ್ದು, ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.