ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪಾ ಗ್ರಾ.ಪಂ ವ್ಯಾಪ್ತಿಯ ಹಾವಿನಬೀಳು ಗ್ರಾಮದ ಹೆಮಜೆನಿಯಲ್ಲಿ ಬಾಲಕನ ಸಮಯಪ್ರಜ್ಞೆಯಿಂದಾಗಿ ಭಾರಿ ಅಗ್ನಿ ದುರಂತವೊಂದು ತಪ್ಪಿದೆ. 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 9 ವರ್ಷದ ಬಾಲಕ ಸಮರ್ಥ ವೆಂಕಟ್ರಮಣ ಗೌಡ ಶಾಲೆಯಲ್ಲಿ ಗಾಂಧೀ ಜಯಂತಿ ನಿಮಿತ್ತ ನಡೆದ ಶ್ರಮದಾನವನ್ನು ಮುಗಿಸಿ, ಮನೆಗೆ ತೆರಳಿದ್ದಾನೆ. ಆ ಸಂದರ್ಭದಲ್ಲಿ ಮನೆ ಸಮೀಪಿಸುತ್ತಿದ್ದಂತೆ ತಮ್ಮ ಮನೆಯ ಸುತ್ತ- ಮುತ್ತ ಹೊಗೆಯಾಡುತ್ತಿರುವುದನ್ನು ಕಂಡಿದ್ದಾನೆ. ಹತ್ತಿರ ಹೋಗಿ ನೋಡಿದಾಗ ಮನೆಗೆ ತಾಗಿಕೊಂಡಿರುವ ಕೊಟ್ಟಿಗೆ ಮನೆಗೆ ಬೆಂಕಿಬಿದ್ದಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ತಾವು ವಾಸಿಸುವ ಮನೆಗೂ ಬೆಂಕಿ ವ್ಯಾಪಿಸುವುದರಲ್ಲಿತ್ತು.

RELATED ARTICLES  ರಿಕ್ಷಾಗೆ ಗುದ್ದಿದ ಕಾರು : ರಿಕ್ಷಾ ಚಾಲಕನಿಗೆ ಗಂಭೀರ ಗಾಯ : ಗೇರುಸೊಪ್ಪಾ ಸಮೀಪ ಘಟನೆ

ಮನೆಯಲ್ಲಿ ತಂದೆ-ತಾಯಿಗಳಿಲ್ಲದ್ದನ್ನು ತಿಳಿದ ಸಮರ್ಥ ಧೃತಿಗೆಡದೇ, ತಕ್ಷಣ ಕಾರ್ಯಪ್ರವರ್ತನಾಗಿದ್ದಾನೆ. ಹತ್ತಿರದಲ್ಲೇ ಇದ್ದ ನೀರನ್ನು ಬಳಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿ, ಯಶಸ್ವಿಯಾಗಿದ್ದಾನೆ.

RELATED ARTICLES  ಸಾಗರ :ಸಿಡಿದ ಹಿಂದೂ ಸಂಘಟನೆಗಳ ತಣ್ಣಗಾಗಿಸಲು ಹರತಾಳು ಯತ್ನ…!

ನಂತರ ಪಕ್ಕದ ಊರಿನಲ್ಲಿ ಅಡಿಕೆ ಸುಲಿಯಲು ಹೋಗಿದ್ದ ತನ್ನ ತಾಯಿಯ ಬಳಿ ಹೋಗಿ ನಡೆದ ಘಟನೆಯನ್ನು ತಿಳಿಸಿದ್ದಾನೆ. ಅಷ್ಟೊತ್ತಿಗೆ ಅಲ್ಲಿದ್ದ ಅಡಿಕೆ ಹಾಗೂ ಹಿಂಡಿ ಚೀಲ ಸೇರಿದಂತೆ ಹಲವು ಬಗೆಯ ಪರಿಕರಗಳು ಬೆಂಕಿಗೆ ಆಹುತಿಯಾಗಿತ್ತು. ಬಾಲಕನ ಸಮಯಪ್ರಜ್ಞೆ ಹಾಗೂ ಧೈರ್ಯ ಸಾಹಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.