ಶಿರಸಿ: ರಾಜ್ಯ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಅಕ್ಟೋಬರ್ 7 ರಿಂದ 15 ರವರೆಗೆ ನವರಾತ್ರಿ ಉತ್ಸವ ನಡೆಯಲಿದೆ. ನವರಾತ್ರಿ ಉತ್ಸವದ ಧಾರ್ಮಿಕ ಪದ್ಧತಿಯಂತೆ ಆಚರಣೆಯನ್ನು ಸೀಮಿತವಾಗಿ ನಡೆಸಲಾಗುವುದು. ಇದರ ಹೊರತಾಗಿ ಕೀರ್ತನೆ, ಸಾಂಸ್ಕೃತಿಕ, ಸ್ಪರ್ಧಾ ಕಾರ್ಯಕ್ರಮ ಇರುವುದಿಲ್ಲ ಎಂದು ಧರ್ಮದರ್ಶಿ ಮಂಡಳಿ ತಿಳಿಸಿದೆ.

RELATED ARTICLES  ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಯಲ್ಲಾಪುರದ ವ್ಯಕ್ತಿಗೆ 14 ವರ್ಷ ಜೈಲು ಶಿಕ್ಷೆ!

ಪ್ರತಿದಿನ ಎಂದಿನಂತೆ ಉಡಿ, ಮಹಾಪೂಜೆ, ಪುಷ್ಪಾಲಂಕಾರ ಪೂಜೆ, ತುಲಾಭಾರ, ಹರಕೆ ಕಾಣಿಕೆ ಅರ್ಪಣೆ ಸೇವೆಗೆ ಮಾತ್ರ ಅವಕಾಶವಿರಲಿದೆ. ಶಾಶ್ವತವಾಗಿ ನಡೆಯುವ ಭಕ್ತಕೋಟಿ, ನಿರಂತರ, ನಿತ್ಯಸೇವೆ ಪೂಜೆಯು ಎಂದಿನಂತೆ ನಡೆಯುವುದು ಎಂದು ತಿಳಿಸಲಾಗಿದ್ದು, ಅ.15 ರಂದು ವಿಜಯದಶಮಿ ಆಚರಣೆ ಅಂಗವಾಗಿ ಅಂದು ಪಡಲಿಗೆ ಉತ್ಸವ, ಸೀಮೋಲ್ಲಂಘನ, ಪಲ್ಲಕ್ಕಿ ಉತ್ಸವ, ಶ್ರೀ ಹನುಮಂತ ದೇವರ ಪಲ್ಲಕ್ಕಿಯು ಸಾಯಂಕಾಲ ನಗರದಲ್ಲಿ ಸಂಚರಿಸುವುದು. ರಾತ್ರಿ 10 ಘಂಟೆಯ ನಂತರ ಕೋಟೆಕೆರೆ ಗದ್ದುಗೆಯ ಮೇಲೆ ಮಾರಿಕಾಂಬಾ ದೇವಿಯ ಪಲ್ಲಕ್ಕಿ ಉತ್ಸವ, ಕಲಶ ವಿಸರ್ಜನೆ ಪಡಿಯಾಟ ವಗೈರೆ ನಡೆಯುವುದೆಂದು ಪ್ರಕಟಣೆ ತಿಳಿಸಿದೆ.

RELATED ARTICLES  ಪದ್ಮಭೂಷಣ ಡಾ. ಬಿ.ಎಂ.ಹೆಗಡೆಯವರಿಗೆ ನಿನಾದ ಸಂಘಟನೆಯಿಂದ ಸನ್ಮಾನ