ಶಿರಸಿ: ಹುಟ್ಟು ಹಾಗೂ ಸಾವು ದೈವೀಚ್ಛೆ ಅಂತಾರೆ, ಯಾರ ಬದುಕು ಹೇಗೆ ಕೊನೆಯಾಗುತ್ತೋ ಯಾರಿಗೂ ತಿಳಿಯದು. ಹೌದು, ಬಸ್ ನಿರ್ವಾಹಕ ಕಾರ್ಯ ನಿರ್ವಹಿಸುತ್ತಿರುವಾಗಲೇ ಸಾರಿಗೆ ನೌಕರನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ನಗರದ ಡಿಪೋ ಬಳಿ ನಡೆದಿದೆ.

RELATED ARTICLES  ಮಾಜಿ ತಾಪಂ ಸದಸ್ಯ ರಾಜುಪಟಗಾರ ಬಿಜೆಪಿ ಬಲಕ್ಕೆ.

ಅವಪ್ಪ ಶರಣಪ್ಪ ಬೆಲಗೂರ(49)ಎಂಬಾತನೆ ಸಾವನ್ನಪ್ಪಿದ ಬಸ್ ನಿರ್ವಾಹಕ, ಈತ ಧರ್ಮಸ್ಥಳ-ಹುಬ್ಬಳ್ಳಿ ಬಸ್ ನಿರ್ವಾಹಕನಾಗಿ ಹುಬ್ಬಳ್ಳಿಗೆ ಹೋಗುತ್ತಿರುವಾಗ ಡಿಪೋ ಹತ್ತಿರ ಈ ಘಟನೆ ನಡೆದಿದೆ. ಈ ಕುರಿತು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿ.ಎಸ್.ಐ. ಭೀಮಾಶಂಕರ ತನಿಖೆ ಕೈಗೊಂಡಿದ್ದಾರೆ.

RELATED ARTICLES  ಗೋಕರ್ಣ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದಾತನ ಬಂಧನ

ಈತನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅವರ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಬಂಧು ಮಿತ್ರರು ಹಾಗೂ ಸ್ನೇಹಿತರೊಂದಿಗೆ ಸಂತೋಷದಿಂದ ಓಡಾಡಿಕೊಂಡಿದ್ದ ಈತನ ಅಗಲುವಿಕೆಯ ನೋವು ಸ್ನೇಹಿತರಲ್ಲಿ ಹಾಗೂ ಬಂಧು ಬಾಂಧವರ ಮಡುಗಟ್ಟಿದೆ.