ಹೊನ್ನಾವರ: ಅದೆಷ್ಟೇ ಕಠಿಣ ಕಾನೂನುಗಳನ್ನು ರೂಪಿಸಿದರೂ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗಿ ಜೀವಕ್ಕೇ ಕಂಟಕ ತಂದಿಕೊಳ್ಳುವ ಪ್ರಸಂಗಗಳು ಮತ್ತೆ ಮತ್ತೆ ವರದಿಯಾಗುತ್ತಿದೆ. ಇಂದು ಹೊನ್ನಾವರ ತಾಲೂಕಿನ ಕಾಸರಕೋಡ ಸಮೀಪದ ಅಂತರಾಷ್ಟ್ರೀಯ ಬ್ಲೂ ಪ್ಲಾಗ್ ಮಾನ್ಯತೆ ಹೊಂದಿರುವ ಬೀಚ್ ನಲ್ಲಿ ನೀರಿಗಿಳಿದಾಗ ಅಲೆಯ ಹೊಡೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಲೈಫ್ ಗಾರ್ಡಗಳು ರಕ್ಷಣೆ ಮಾಡಿದ ಘಟನೆ ನಡೆದಿದೆ. ಜಿಲ್ಲೆಯ ಕಡಲತೀರದಲ್ಲಿ ಪದೇ ಪದೇ ಸಾವು ಸಂಭವಿಸುತ್ತಿದ್ದರೂ ಪಾಠ ಕಲಿಯದ ಪ್ರವಾಸಿಗರು ಮತ್ತೆ ಮತ್ತೆ ಕಡಲಿಗಿಳಿದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

RELATED ARTICLES  ಜಿ.ಸಿ. ಕಾಲೇಜಿನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಕಾಲೇಜಿನಲ್ಲಿಯೇ ಓದುತ್ತಿರುವ ವಿದ್ಯಾರ್ಥಿಯೊಬ್ಬ ನ ಕವನ ಸಂಕಲನ ಬಿಡುಗಡೆ

ಅಲೆಯ ಹೊಡೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ತಮ್ಮ ಪ್ರಾಣದ ಹಂಗು ತೊರೆದು ಲೈಪ್ ಗಾರ್ಡ್
ಸಿಬ್ಬಂದಿಗಳು ರಕ್ಷಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಮಹಾಲಯ ಅಮವಾಸ್ಯೆಯ ರಜೆ ಹಿನ್ನಲೆಯಲ್ಲಿ ಬಾಗಲಕೋಟೆಯಿಂದ ಆಗಮಿಸಿದ ಪ್ರವಾಸಿಗರ ತಂಡದ ಮಂಜುಳಾ ಬಿರದಾರ ಮತ್ತು ಲಕ್ಷಣ ಬಿರದಾರ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದರು. ಕೂಡಲೇ ರಕ್ಷಣೆ ಧಾವಿಸಿದ ಲೈಪ ಗಾರ್ಡಗಳಾದ ಯಶವಂತ ಮಾದೇವ ಹರಿಕಂತ್ರ, ಹಾಗೂ ವಿರೇಂದ್ರ ಬಾಬು ಅಂಬಿಗ, ಸುಬ್ರಾಯ ತಾಂಡೇಲ ಇಬ್ಬರನ್ನೂ ರಕ್ಷಿಸುವಲ್ಲಿ ಸಫಲರಾಗಿದ್ದಾರೆ.

RELATED ARTICLES  ಏ.1ರಿಂದ ಹೊಸ ಚೆಕ್‌ಬುಕ್ ಕಡ್ಡಾಯ : ಎಸ್. ಬಿ. ಇ.

ಕಳೆದ ಮೂರು ದಿನದಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗರನ್ನು ಲೈಪ್ ಗಾರ್ಡ್ ಗಳು ರಕ್ಷಿಸಿದ ಮೂರನೇ ಘಟನೆ ಇದಾಗಿದೆ. ಕಾರವಾರದಲ್ಲಿ ಐವರು ಮಕ್ಕಳು, ಮುರ್ಡೇಶ್ವರದಲ್ಲಿ ಒಬ್ಬ ಪ್ರವಾಸಿಗ ಹಾಗೂ ಇಂದು ಹೊನ್ನಾವರದ ಕಾಸರಕೋಡದಲ್ಲಿ ಇಬ್ಬರು ಪ್ರವಾಸಿಗರು ಸಮುದ್ರಪಾಲಾಗುತ್ತಿರುವಾಗ ಲೈಪ್ ಗಾರ್ಡ್ ಗಳು ಅವರನ್ನು ರಕ್ಷಿಸಿದ್ದಾರೆ.