ಗೋಕರ್ಣ: ಪ್ಯಾಷನ್ ಮಾಡಲು ಟ್ಯಾಟೂ ಹಾಕಿಸಿಕೊಂಡ ಯುವತಿಯೊಬ್ಬಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗೋಕರ್ಣದಲ್ಲಿ ನಡೆದಿದೆ. ಟ್ಯಾಟೂ ಹಾಕಿಸಿಕೊಂಡು ಸಂತಸದಿಂದ ಟ್ಯಾಟೂ ಟ್ರೆಂಡ್ ಅನುಭವಿಸುವ ಮೊದಲೇ ಈ ಘಟನೆ ನಡೆದಿದೆ. ಗೋಕರ್ಣದಲ್ಲಿ ಪ್ರವಾಸಿಗರು ಹಾಗೂ ಪ್ಯಾಶನ್ ಪ್ರಿಯರನ್ನು ಆಕರ್ಷಿಸುವ ಅದೆಷ್ಟೋ ಟ್ಯಾಟೂ ಅಂಗಡಿಗಳಿದ್ದು ಇಲ್ಲಿನ ಜನರೂ ಟ್ಯಾಟೂ ಟ್ರೆಂಡ್ ಗೆ ಮರುಳಾಗುತ್ತಿದ್ದಾರೆ.
ಟ್ಯಾಟೂ ಹಾಕಿಸಿಕೊಂಡ ಯುವತಿಗೆ ಅಡ್ಡ ಪರಿಣಾಮ ಉಂಟಾಗಿ ಇದೀಗ ಆಸ್ಪತ್ರೆ ಸೇರಿದ್ದಾಳೆ. ಪುರಾಣ ಪ್ರಸಿದ್ಧ ಗೋಕರ್ಣದಲ್ಲಿ ಟ್ಯಾಟೂ ಅಂಗಡಿಗಳು ಎಲ್ಲೆಂದರಲ್ಲಿ ಹೆಚ್ಚುತ್ತಿವೆ. ಟ್ಯಾಟೂ ಹಾಕಿಸಿಕೊಳ್ಳುವಾಗ ಅಂಗಡಿಕಾರರು ಯಾವ ರೀತಿಯ ಸುರಕ್ಷತಾ ಕ್ರಮ ಅನುಸರಿಸುತ್ತಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಇದನ್ನು ಗಮನದಲ್ಲಿ ಇರಿಸಿಕೊಂಡು, ಅಂಗಡಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ, ಟ್ಯಾಟೂ ಹಾಕಿಸಿಕೊಳ್ಳುವುದು ಒಳಿತು ಎಂಬುದು ತಿಳಿದವರ ಅನಿಸಿಕೆ.
ಟ್ಯಾಟೂ ಹಾಕಿಸಿಕೊಳ್ಳುವುದು ಇಂದಿನ ಫ್ಯಾಷನ್ ಏನೋ ನಿಜ. ಇದು ಒಂದು ರೀತಿಯ ಟ್ರೆಂಡ್ ಆಗಿಬಿಟ್ಟಿದೆ. ಭಿನ್ನ ವಿಭಿನ್ನ ಟ್ಯಾಟೂಗಳು ಯುವ ಸಮುದಾಯವನ್ನು ಆಕರ್ಷಿಸುತ್ತವೆ. ಆದರೆ, ಟ್ಯಾಟೂ ಹಾಕಿಸಿಕೊಳ್ಳುವಾಗ ಎಚ್ಚರ ಇರಬೇಕು. ಇಲ್ಲದಿದ್ರೆ ಕೆಲವೊಮ್ಮೆ ಆಸ್ಪತ್ರೆಗೆ ಅಲೆದಾಡಬೇಕಾಗುವ ಪರಿಸ್ಥಿತಿ ಬಂದುಬಿಡುತ್ತದೆ ಎನ್ನಿವುದಕ್ಕೆ ಇದೊಂದು ಸ್ಪಷ್ಟವಾದ ಉದಾಹರಣೆಯಾಗಿದೆ.