ಕುಮಟಾ: ತಾಲ್ಲ್ಲೂಕಿನ ಬರ್ಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಸಂಸ್ಕೃತವನ್ನು ಅಭ್ಯಸಿಸುವ ಹಾಗೂ ಬರ್ಗಿ ಪ್ರೌಢಶಾಲೆಯಲ್ಲಿ ಕಲಿತು ಕಾಲೇಜಿನಲ್ಲಿ ಸಂಸ್ಕೃತವನ್ನು ಆಯ್ದು ಓದುವ ಎಲ್ಲಾ ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಭರಿಸುವುದಾಗಿ ಉತ್ತರಕನ್ನಡ ಜಿಲ್ಲಾ ಪಂಚಾಯತದ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಬಾವಿಯವರು ಘೋಷಿಸಿರುತ್ತಾರೆ. ಈ ಬಗ್ಗೆ ಶಾಲೆಗೆ ಹಾಗೂ ಇಲಾಖೆಗೆ ಪತ್ರವನ್ನು ಬರೆದಿದ್ದಾರೆಂದು ಬಲ್ಲ ಮೂಲದಿಂದ ತಿಳಿದು ಬಂದಿದೆ.


ಅವರು ” ಬಾಪು – ಶಾಸ್ತ್ರಿ ಜಯಂತಿ” ಯ ಸುದಿನದಂದು ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗಣೇಶ ಗುನಗ, ರೋಶನ ಪಟಗಾರ, ಪ್ರಣೀತ ಜಾಲಿಸತ್ಗಿ, ಆದಿತ್ಯ ಪಟಗಾರ, ನಿತೀನ ಪಟಗಾರ, ಜೀವನ ಪಟಗಾರ, ದರ್ಶ್ಮಿತಾ ಹರಿಕಾಂತ ಹಾಗೂ ಚೇತನ ಹರಿಕಂತ್ರ ಎಂಬ ಸಂಸ್ಕೃತ ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಿದರು.

RELATED ARTICLES  ಅನಾಥವಾದಂತಿದೆ ಪಾವಿನಕುರ್ವಾ! ಜನತೆಯ ಗೋಳಿಗೆ ಸಿಗುತ್ತಿಲ್ಲವೇ ಪರಿಹಾರ?


ಇದಕ್ಕೆ ಸಾಕ್ಷಿಯಾದ ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟರವರು – ಸಂಸ್ಕೃತದ ಅಧ್ಯಯನದಿಂದ ಸಂಸ್ಕೃತಿ ಮತ್ತು ಪರಂಪರೆಗಳ ಅರಿವನ್ನು ಹೊಂದುವುದು ಸಾಧ್ಯವೆಂದು, ಪ್ರದೀಪ ನಾಯಕರ ಸಂಸ್ಕೃತ ಪರವಾದ ನಿಲುವು ಅವರ ಸಾಂಸ್ಕೃತಿಕ ಪ್ರಜ್ಞೆಯ ಹೆಗ್ಗುರುತಾಗಿದೆ ಎಂದರಲ್ಲದೇ, ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅಭಿನಂದಿಸಿ, ಇತರರು ಅವರನ್ನು ಮಾದರಿಯೆಂದುಕೊಳ್ಳಬೇಕು ಎಂದರು.

RELATED ARTICLES  ಹೊನ್ನಾವರ ಮಂಡಲದ ವಿವಿಧೆಡೆ ಕಾರ್ಯಕರ್ತರ ಸಭೆ ನಡೆಸಿದ ದಿನಕರ ಶೆಟ್ಟಿ


ಸಂಸ್ಕೃತ ಅಧ್ಯಾಪಕ ಮಂಜುನಾಥ ಗಾಂವಕರ್ ಬರ್ಗಿ, ಹಿರಿಯ ಶಿಕ್ಷಕಿ ಸರಸ್ವತಿ ನಾಯಕ, ಯಶೋಧಾ ಕೆ.ಬಿ, ಗೀತಾ ನಾಗೇಕರ್, ವೀಣಾ ಗಾಂವಕರ್, ತಾರಾ ನಾಯ್ಕ ಹಾಗೂ ಕಮಲಾಬಾಯಿ ಭಾಗ್ವತ್ ಮೊದಲಾದವರಿದ್ದರು.