ಕುಮಟಾ: ತಾಲ್ಲೂಕಿನ ಬರ್ಗಿಯಲ್ಲಿ “ಶ್ರೀಮಹಾಲಿಂಗೇಶ್ವರ ವಿದ್ಯಾಪೀಠ” ವೆಂಬ ಹೆಸರಿನಲ್ಲಿ ರಚನಾತ್ಮಕವಾದ ಸಂಘಟನೆಯೊಂದು ಜನ್ಮತಳೆದಿದೆ. ಗ್ರಾಮದಲ್ಲಿ ಹಾಗೂ ಸುತ್ತಣದ ಪರಿಸರದಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳುವ ಸದುದ್ದೇಶದಿಂದ ಸಮಾನ ಮನಸ್ಕ ವಿದ್ಯಾಭಿಮಾನಿಗಳು ಸಮ್ಮಿಳಿತರಾಗಿ ಈ ವಿದ್ಯಾಪೀಠವನ್ನು ಹುಟ್ಟುಹಾಕಿದ್ದಾರೆ.


ಯಾವುದೇ ರಾಜಕೀಯ ಮತ್ತು ಆರ್ಥಿಕ ಅಪೇಕ್ಷೆಯನ್ನು ಹೊಂದಿರದ, ಕೇವಲ ಜನಪರ ದೃಷ್ಟಿಯಲ್ಲಿ ವಿದ್ಯಾಪೀಠವು ತೊಡಗಿಸಿಕೊಳ್ಳುವ ಆಶಯವನ್ನು ಹೊಂದಿದೆ ಎಂದು ಅದರ ಗೌರವಾಧ್ಯಕ್ಷರಾದ ಮಂಜುನಾಥ ಗಾಂವಕರ್ ಬರ್ಗಿಯವರು ಅಭಿಪ್ರಾಯಿಸಿದ್ದಾರೆ.


ಅಲಂಕೃತ ಶ್ರೀಮಹಾಲಿಂಗೇಶ್ವರಸ್ವಾಮಿಯನ್ನೊಳಗೊಂಡ ಭಕ್ತಿಭಂಡಾರಿ ಬಸವಣ್ಣನವರ “ಕಾಯಕವೇ ಕೈಲಾಸ” ವೆಂಬ ಧ್ಯೇಯ ವಾಕ್ಯವನ್ನು ಬಳಸಿಕೊಂಡು ಅಂಕೋಲಾದ ಸೃಜನಶೀಲ ಡಿಜಿಟಲ್ ಕಲೆಗಾರ ಶ್ಯಾಮಸುಂದರ ಗೌಡ ವಿದ್ಯಾಪೀಠದ ಲಾಂಛನವನ್ನು ಸೊಗಸಾಗಿ ಚಿತ್ರಿಸಿದ್ದಾರೆ.

RELATED ARTICLES  ಅನಂತ ಕುಮಾರ್ ಹೆಗಡೆ ತನ್ನ ಮಾವನೆಂದು ಹೇಳಿ ಮೋಸ..!


ಅದನ್ನು ಕುಮಟಾದ ಸಹೃದಯಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟರವರು “ಬಾಪೂ-ಶಾಸ್ತ್ರಿ ಜಯಂತಿ” ಯಂದು ಶ್ರೀಮಹಾಲಿಂಗೇಶ್ವರ ಸಮುದಾಯ ಭವನದಲ್ಲಿ ಲೋಕಾರ್ಪಣೆಗೊಳಿಸಿದ್ದಾರೆ. ಇದಕ್ಕೆ ಉತ್ತರಕನ್ನಡ ಜಿಲ್ಲಾ ಪಂಚಾಯತದ ಮಾಜಿ ಸದಸ್ಯ – ಮುತ್ಸದ್ದಿ ಜನನಾಯಕ ಪ್ರದೀಪ ನಾಯಕ ದೇವರಭಾವಿಯವರೊಂದಿಗೆ ನಿವೃತ್ತ ಮುಖ್ಯಾಧ್ಯಾಪಕ ಆರ್. ಬಿ. ಪಟಗಾರ, ಅರ್ಚಕ ಭಾಸ್ಕರ ದೇಸಾಯಿಯವರಲ್ಲದೇ ಪೀಠಾಧ್ಯಕ್ಷ ಬಿ. ಎನ್. ಗಾಂವಕರ್ , ಕಾರ್ಯದರ್ಶಿ ಉಮೇಶ ನಾಯ್ಕ, ಪಿ. ಕೆ. ಪಟಗಾರ, ಮೋಹನ ಗಾಂವಕರ್, ಹನುಮಂತ ನಾಯ್ಕ, ಸಿ.ಜೆ. ಪಟಗಾರ, ಎಮ್. ಎಸ್. ನಾಯ್ಕ, ರಾಜು ನಾಯ್ಕ, ಮಹಾದೇವಿ ಆಚಾರಿ, ವನಿತಾ ಪಟಗಾರ ಹಾಗೂ ರಮೇಶ ಜಯರಾಮ ಸಾಕ್ಷಿಯಾಗಿರುತ್ತಾರೆ.

RELATED ARTICLES  ವೃದ್ದನನ್ನು ಉಳಿಸಲು ಹೋಗಿ ಪ್ರಾಣತೆತ್ತ ಲಾರಿ ಚಾಲಕ