ಹೊನ್ನಾವರ: ಭಾರತೀಯ ಜನತಾ ಪಾರ್ಟಿ,ರೈತ ಮೋರ್ಚಾ ಹೊನ್ನಾವರ ಮಂಡಲ ವತಿಯಿಂದ ನೂತನ ರೈತ ಮೋರ್ಚಾ ಸತ್ಯ-ಮಿಥ್ಯ ಕಾರ್ಯಕ್ರಮ ಜರುಗಿತು. ರೈತ ಮೋರ್ಚಾ ರಾಜ್ಯಾ ಪ್ರಧಾನಕಾರ್ಯದರ್ಶಿಗಳಾದ ಶ್ರೀ ಪ್ರಸನ್ನ ಕೈರೆಕೈ ಅವರು ನೂತನ ಕೃಷಿ ಕಾಯ್ದೆಯ ಕುರಿತು ಯಾವುದು ಸತ್ಯ ಯಾವುದು ಮಿಥ್ಯ ಎಂಬುದು ವಿವರವಾಗಿ ಸಭೆಯಲ್ಲಿ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಅಧ್ಯಕ್ಷರಾದ ಶ್ರೀ ವೆಂಕಟೇಶ್ ನಾಯ್ಕ, ಶಿವಮೊಗ್ಗಾ ವಿಭಾಗದ ಸಹ ಸಂಚಾಲಕರಾದ ಎನ್. ಎಸ್. ಹೆಗಡೆ, ಪ್ರಧಾನ ಕಾರ್ಯದರ್ಶಿ ಶ್ರೀ ಗೋವಿಂದ ನಾಯ್ಕ, ಮಂಡಲ ಅಧ್ಯಕ್ಷರಾದ ಶ್ರೀ ರಾಜು ಬಂಡಾರಿ, ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಶ್ರೀ ಮಹೇಶ ಹೊಸಕೊಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಉಮೇಶ ನಾಯ್ಕ, ಮಾಜಿ ಜಿಲ್ಲಾ ಅಧ್ಯಕ್ಷರಾದ ಎಮ್. ಜಿ. ನಾಯ್ಕ , ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿಷ್ಣುಮೂರ್ತಿ ಹೆಗಡೆ ಹಾಗು ಶ್ರೀ ಪ್ರೇಮ ಕುಮಾರ್ ನಾಯ್ಕ ,ಗುರುಪ್ರಸಾದ್ ಹೆಗಡೆ, ಹಾಗೂ ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕರಾದ ಶ್ರೀ ನವೀನಕುಮಾರ್ ಅಯೋಧ್ಯ, ಶ್ರೀಮತಿ ಶ್ರಿಕಲಾ ಶಾಸ್ತ್ರಿ ನಿರುಪಣೆ ಮಾಡಿದರು ಹಾಗೂ ಪಕ್ಷದ ಪದಾಧಿಕಾರಿಗಳು, ರೈತ ಸಂಘಟನೆಯ ಪ್ರಮುಖರು, ರೈತರು ಉಪಸ್ಥಿತರಿದ್ದರು.

RELATED ARTICLES  ತೆಂಗಿನಮರದ ಬಳಿ ತೆರಳಿದ ಮಹಿಳೆ ಸಾವು.