ಭಟ್ಕಳ: ದಸರಾ ಉತ್ಸವ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಹತ್ತು ದಿನಗಳ ಕಾಲ ವೈಭವಯುತವಾಗಿ ನಡೆಯಲ್ಲಿದ್ದು ಈ ಶರನ್ನವರಾತ್ರಿ ಮೊದಲ ದಿನವಾದ ಗುರುವಾರ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ನಿನಾದ ಸಂಚಾಲಕ ಹಾಗೂ ಯುವ ಪ್ರಶಸ್ತಿ ಪುರಸ್ಕೃತ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರು ಭಕ್ತಿ ಸಂಗೀತ ನಡೆಸಿಕೊಟ್ಟರು. ಒಂದುವರೆ ಗಂಟೆಗಳ ಕಾಲ ನಡೆದ ಮುಂಡಳ್ಳಿ ಯವರ ಗಾಯನ ನೆರೆದ ಸಂಗೀತ ಆಸಕ್ತರ ಮೆಚ್ಚುಗೆಗೆ ಪಾತ್ರವಾಯಿತು. ಇವರೊಂದಿಗೆ ತಬಲಾದಲ್ಲಿ ನವೀನ್ ಶೇಟ್ ಹೊನ್ನಾವರ, ಹಾರ್ಮೋನಿಯಂ ನಲ್ಲಿ ವಿನೋದ ಹೊನ್ನಾವರ ಹಾಗೂ ಪ್ಲೂಟ್ ನಲ್ಲಿ ವಿನಾಯಕ ಭಂಡಾರಿ ಸಾತ್ ನೀಡಿದರು.

RELATED ARTICLES  ಕೆನರಾ ಡಿಸ್ಟ್ರಿಕ್ಟ್ ಟೀಚರ್ಸ್ ಸೊಸೈಟಿ, ಅಂಕೋಲಾ ಅಧ್ಯಕ್ಷರಾಗಿ ನಾರಾಯಣ ಎಚ್ ನಾಯಕ ಹಿರೇಗುತ್ತಿ