ಕುಮಟಾದ ನೆಲ್ಲಿಕೇರಿಯ ಹನುಮಂತ ಬೆಣ್ಣೆ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆಯ ಕಾರ್ಯಕ್ರಮವು ಗುರುವಾರ ದಿನಾಂಕ 07/10/2021 ರಂದು ನೆರವೇರಿತು.ಬಳಿಕ ನಡೆಸ ಸಭಾಕಾರ್ಯಕ್ರಮದಲ್ಲಿ ಈ ಬಾರಿಯ ಸಿ ಇ ಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 435 ಸ್ಥಾನ ಪಡೆದ ಪೂರ್ಣಿಮಾ ಪಟಗಾರ ಇವಳನ್ನು ಶಿಕ್ಷಣ ಸಚಿವರ ಮೂಲಕ ಅಭಿನಂದಿಸಬೇಕೆಂದು ಶಾಸಕರಾದ ದಿನಕರ ಶೆಟ್ಟಿಯವರು ನಿರ್ಧರಿಸಿದ್ದರು.ಕುಮಾರಿ ಪೂರ್ಣಿಮಾ ಪಟಗಾರ ಇವಳು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಬಿ ಕೆ ಭಂಡಾರಕರ್ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಪೂರೈಸಿದ ವಿದ್ಯಾರ್ಥಿನಿ ಆಗಿದ್ದು ವಿಧಾತ್ರಿ ಅಕಾಡೆಮಿಯ ಉಪನ್ಯಾಸಕರಿಂದ ತರಬೇತಿ ಪಡೆದು ಜಿಲ್ಲೆಗೇ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಉತ್ತರಕನ್ನಡ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ಈ ಜಿಲ್ಲೆಯಲ್ಲಿಯೇ ಕಲಿತು ಸಾಧನೆ ಮಾಡಬಹುದಾಗಿದೆ.

RELATED ARTICLES  ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೇಸ್ ವಿಜಯ ಕುಮಟಾದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು.

ಇದಕ್ಕಾಗಿ ಹೊರ ಜಿಲ್ಲೆಗಳಿಗೆ ಅಲೆದಾಡಿ ಹಣವ್ಯಯಿಸಬೇಕಾಗಿಲ್ಲ ಎಂಬ ಸಂದೇಶವನ್ನು ಸಾರಿದ ವಿದ್ಯಾರ್ಥಿನಿ ಆಗಿದ್ದಾಳೆ.ಈಕೆಯ ಸಾಧನೆಯನ್ನು ಕೇಳಿ ಸಂತೋಷಗೊಂಡ ಮಾನ್ಯ ಶಿಕ್ಷಣ ಸಚಿವರು ಇದೊಂದು ಅನುಪಮ ಸಾಧನೆ ಆಗಿದ್ದು ರಾಜ್ಯಕ್ಕೇ 435 ಸ್ಥಾನ ಪಡೆಯುವುದು ಸಾಧಾರಣ ಸಂಗತಿ ಅಲ್ಲ . ವಿದ್ಯಾರ್ಥಿಗಳಿಗೆ ಇದು ಸ್ಪೂರ್ತಿಯ ಸಂಗತಿ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.ಪೂರ್ಣಿಮಾಳ ಸಾಧನೆಯ ಮುಂದೆ ತನ್ನ ಭಾಷಣದ ಅಗತ್ಯ ಇಲ್ಲ ಎಂದು ಹೇಳಿದರು.ಪೂರ್ಣಿಮಾಳ ಸಾಧನೆಗೆ ಸಭೆಯಲ್ಲಿ ನೆರೆದಿರುವ ಸಾವಿರಾರು ಮಂದಿ ಪ್ರೇಕ್ಷಕರು ಕರತಾಡನದ ಮೂಲಕ ಅಭಿನಂದಿಸಿದರು

RELATED ARTICLES  ಸಿ.ಆರ್.ಪಿ.ಎಫ್ ಪರೇಡ್ : ಚುನಾವಣಾ ಹಿನ್ನೆಲೆಯಲ್ಲಿ ಸಂಚಲನ.