ಗೋಕರ್ಣ : ರಾಜ್ಯದ ಪುರಾಣ ಪ್ರಸಿದ್ಧ ಗೊಕರ್ಣದ ಮಹಾಬಲೇಶ್ವರ ದೇವಸ್ಥಾನ ಸುಪ್ರೀಂ ಕೋರ್ಟ ಆದೇಶದಂತೆ ನಿರ್ಮಿಸಿದ ಆಡಳಿತ ಉಸ್ತುವಾರಿ ಸಮಿತಿ ಸುಪರ್ಧಿಗೆ ಬಂದ ನಂತರ ಉಪಾದೀವಂತ ಹಾಗೂ ಅನುವಂಶೀಯ ಅರ್ಚಕರ ನಡುವೆ ಗರ್ಭಗುಡಿಯಲ್ಲಿರುವ ಆತ್ಮಲಿಂಗ ಪೀಠದಲ್ಲಿ ಆಸೀನರಾಗುವ ಮತ್ತು ನಂದಿಗೃಹದಲ್ಲಿನ ಪ್ರಸಾದ ವಿತರಣೆ ,ದಕ್ಷಿಣೆ ಕಾಸಿನ ಹಕ್ಕಿಗಾಗಿ ಸಂಘರ್ಷ ಏರ್ಪಟ್ಟು ಬರುವ ಭಕ್ತರಿಗೆ ದೇವರ ಪೂಜೆ ಹಾಗೂ ಆತ್ಮಲಿಂಗ ಸ್ಪರ್ಷಕ್ಕೆ ನಿರ್ಬಂಧ ಹೇರಲಾಗಿತ್ತು.

ಇದೀಗ ಅರ್ಚಕರ ನಡುವೆ ಎದ್ದಿದ್ದ ವಿವಾದಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು ಭಕ್ತರಿಗೆ ಮಹಾಬಲೇಶ್ವರನ ದರ್ಶನಕ್ಕೆ ಆಡಳಿತ ಸಮಿತಿ ಅವಕಾಶ ಕಲ್ಪಿಸಿದ್ದು,ವಿವಾದ ಎಬ್ಬಿಸಿದ ಅರ್ಚಕರಿಗೆ ಆಡಳಿತ ಉಸ್ತುವಾರಿ ಸಮಿತಿ ಶಾಕ್ ನೀಡಿದೆ. ಸಮಿತಿ ತನ್ನ ನಿರ್ಧಾರ ಪ್ರಕಟಿಸಿದ್ದು ಭಕ್ತರಿಗೆ ಆತ್ಮಲಿಂಗ ಸ್ಪರ್ಷ ಪೂಜೆ ಹಾಗೂ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ.

RELATED ARTICLES  ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು; ಹೆಗಡೆ ಹೆಣ್ಣು ಮಕ್ಕಳ ಶಾಲೆಯಲ್ಲಿ ವಕೀಲೆ ಅರ್ಚನ ವಿನಾಯಕ ಪಟಗಾರ ಅಭಿಮತ.

ಸುಪ್ರೀಂ ಕೊರ್ಟಿನ ನಿವೃತ್ತ ನ್ಯಾಯಮೂರ್ತಿ ದೇಗುಲ ನಿರ್ವಹಣಾ ಸಮಿತಿ ಅಧ್ಯಕ್ಷ ಬಿ.ಎನ್. ಶ್ರೀಕೃಷ್ಣ ರವರ ಅಧ್ಯಕ್ಷತೆಯಲ್ಲಿರುವ ಉಸ್ತುವಾರಿ ಸಮಿತಿಯು ಅರ್ಚಕರ ಹಕ್ಕಿನ ಬಗ್ಗೆ ತೀರ್ಮಾನ ಮಾಡುವ ಸಮಿತಿ ಅಲ್ಲ ,ದಿನ ನಿತ್ಯದ ಕಾರ್ಯಗಳಿಗೆ ಆಡಳಿತ ಮಾಡುವ ನಿರ್ವಹಣಾ ಸಮಿತಿ,ಅನುವಂಶೀಯ ಹಾಗೂ ಉಪದೀವಂತ ಅರ್ಚಕರು ಕೋರ್ಟ ಆದೇಶ ತಂದರೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುವುದು. ಯಾರಿಗೂ ವಯುಕ್ತಿಕವಾಗಿ ಪೂಜೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎರಡೂ ಗುಂಪಿನ ಅರ್ಚಕರಿಗೆ ಶಾಕ್ ನೀಡಿದೆ. ತಮ್ಮ ಹಕ್ಕಿಗಾಗಿ ಗದ್ದಲ ಎಬ್ಬಿಸಿದ್ದ ಉಪಾದೀವಂತ ಹಾಗೂ ಅನುವಂಶೀಯ ಅರ್ಚಕರಿಗೆ ಭಕ್ತರನ್ನು ಕರೆತಂದು ಪೂಜೆ ಮಾಡಲು ನಿರ್ಬಂಧ ವಿಧಿಸಿದೆ.

ಕಳೆದ ತಿಂಗಳು ದೇಗುಲ ನಿರ್ವಹಣಾ ಸಮಿತಿಯು ಉಪಾದೀವಂತ ಹಾಗೂ ಅನುವಂಶೀಯ ಅರ್ಚಕರ ಪ್ರತ್ಯೇಕ ಎರಡು ಸಭೆಯನ್ನು ಮಾಡಿ ಅಹವಾಲನ್ನು ಸ್ವೀಕರಿಸಿತ್ತು.ಆದರೇ ಯಾವುದೇ ನಿರ್ಧಾರಕ್ಕೆ ಸಮಿತಿ ಬಂದಿರಲಿಲ್ಲ. ಆದರೇ ಇದೀಗ ಸಮಿತಿಯ ಸದಸ್ಯರಾಗಿರುವ ಜಿಲ್ಲಾಧಿಕಾರಿಗೆ ಆಡಳಿತದ ಕುರಿತು ತೀರ್ಮಾನ ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇದರಂತೆ ಭಕ್ತರಿಗೆ ಇದೀಗ ಮಹಾಬಲೇಶ್ವರನ ದರ್ಶನ,ಸ್ಪರ್ಷ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ.ಇನ್ನು ಸಮಿತಿ ನಿರ್ಧಾರದಂತೆ ,ಸಂಪ್ರದಾಯದಂತೆ ಸಮಿತಿಯಿಂದ ನೇಮಕವಾದ ಅರ್ಚಕರು ದಿನನಿತ್ಯದ ಕಾರ್ಯ ಮಾಡಲು ಮಾತ್ರ ಅವಕಾಶ ಮಾಡಿಕೊಟ್ಟಿದ್ದು ಕಾಸಿಗಾಗಿ ಗೊಂದಲ ಎಬ್ಬಿಸಿ ಭಕ್ತರಿಗೆ ಮಹಾಬಲೇಶ್ವರ ದರ್ಶನ ಸಿಗದಂತೆ ಮಾಡಿದ ಅರ್ಚಕರಿಗೆ ತಕ್ಕ ಪಾಠ ಕಲಿಸಿದೆ. ಈ ಕುರಿತು ಸಮಿತಿಯ ಸದಸ್ಯರಾಗಿರುವ ಜಿಲ್ಲಾಧಿಕಾರಿ ಮುಲೈ ಮುಗಿಲನ್ ರವರು ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿದ್ದಾರೆ.

RELATED ARTICLES  ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವನ ಹೆಡೆಮುರಿ ಕಟ್ಟಿದ ಪೊಲೀಸರು.