ಭಟ್ಕಳ : ಅತಿವೇಗದ ಚಾಲನೆ ಹಾಗೂ ನಿರ್ಲಕ್ಷ್ಯದ ಚಾಲನೆ ಬೈಕ್ ಸುವಾರನ ಜೀವಕ್ಕೆ ತೊಂದರೆ ಮಾಡುವುದಲ್ಲದೆ ಇನ್ನಿತರ ಅಮಾಯಕರಿಗೆ ತೊಂದರೆ ಮಾಡುವ ಸಾಧ್ಯತೆಗಳೂ ಇರುತ್ತದೆ. ಅತಿ ವೇಗದ ಹಾಗೂ ಅಜಾಗರೂಕತೆಯ ಚಾಲನೆಯಿಂದ ವಿದ್ಯಾರ್ಥಿಯೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನಿಂದ ವರದಿಯಾಗಿದೆ. ವಿದ್ಯಾರ್ಥಿಯೊಬ್ಬ ಬಸ್ಸಿಗಾಗಿ ಕಾಯ್ದು ನಿಂತಿದ್ದ ಸಮಯದಲ್ಲಿ ಬೈಕ್ ಸವಾರನೋರ್ವ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿ ವಿದ್ಯಾರ್ಥಿಗೆ ಡಿಕ್ಕಿ ಹೊಡೆದ ಪರಿಣಾಮ ಆತನ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಬೆಳಿಗ್ಗೆ ಇಲ್ಲಿನ ತೆರಮಕ್ಕಿಸಬಾತಿ ಕ್ರಾಸ್ ಬಳಿ ನಡೆದಿದೆ ಎನ್ನಲಾಗಿದೆ.

RELATED ARTICLES  ಬೈಕ್ ಅಪಘಾತ ಸ್ಥಳದಲ್ಲಿಯೇ ಇಬ್ಬರ ದುರ್ಮರಣ

ಗಾಯಗೊಂಡ ವಿದ್ಯಾರ್ಥಿಯನ್ನು ಆದಿತ್ಯಶೆಟ್ಟಿ (16) ಮುರುಡೇಶ್ವರ ಎಂದು ಗುರುತಿಸಲಾಗಿದೆ. ಈತನು ಕಾಲೇಜಿಗೆ ಹೋಗಲು ತೆರ್ನಮಕ್ಕಿಯ ಸಭಾತಿ ಕ್ರಾಸ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಭಟ್ಕಳದಿಂದ ಬೈಕ್‌ನಲ್ಲಿ ಮುರುಡೇಶ್ವರದ ಕಡೆಗೆ ಬರುತ್ತಿದ್ದ ಭಟ್ಕಳ ಮೂಲದ ಸವಾರನೊಬ್ಬ ವಿದ್ಯಾರ್ಥಿಗೆ ಡಿಕ್ಕಿ ಹೊಡೆದಿದ್ದ ಪರಿಣಾಮ ವಿದ್ಯಾರ್ಥಿಯ ತಲೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಕುರಿತು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಪರಿಹಾರಕ್ಕಾಗಿ ಕಚೇರಿಗೆ ಅಲೆಯುತ್ತಿರುವ ನಿರಾಶ್ರಿತರ ಸ್ಥಿತಿ ದುರದೃಷ್ಟಕರ; ಸ್ವರ್ಣವಲ್ಲಿ ಶ್ರೀ