ಕುಮಟಾ: ಇಲ್ಲಿಯ ರೋಟರಿ ಕ್ಲಬ್ ಆಶ್ರಯದಲ್ಲಿ, ಉಡುಪಿ ವಿಭಾಗದ ಸೆಂಟ್ರಲ್ ಎಕ್ಸೈಜ್ ಮತ್ತು ಸರ್ವೀಸ್ ಟ್ಯಾಕ್ಸ್ ಮಂಗಳೂರು ಕಮಿಶನರೇಟ್‍ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮಾಹಿತಿ ಶಿಬಿರವನ್ನು ನಾದಶ್ರೀಯ ರೋಟರಿ ಹಾಲ್ ನಲ್ಲಿ ಏರ್ಪಡಿಸಲಾಗಿತ್ತು.   ಉಡುಪಿ ವಿಭಾಗದ ಅಸಿಸ್ಟಂಟ್ ಕಮೀಶನರ್ ಜಾರ್ಜ್ ಜೊಸೆಫ್ ಆಯ್.ಆರ್.ಎಸ್., ಶಿಬಿರವನ್ನು ಉದ್ಘಾಟಿಸಿ, ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದ ತೆರಿಗೆ ಪದ್ಧತಿಯ ಕುರಿತು  ಮಾತನಾಡಿದರು.  ಉಡುಪಿ ವಲಯದ ಸುಪರಿಟೆಂಡೆಂಟ್ ನಾಗರಾಜ ನಾಯರಿ, ಸಂಪನ್ಮೂಲ ವ್ಯಕ್ತಿಯಾಗಿ  ಮಾಹಿತಿ ನೀಡಿ ಸಭಿಕರ ಎಲ್ಲ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿದರು.

 

ತೆರಿಗೆಗೆ ಸಂಬಂಧಿಸಿದ ಸರ್ವೋಚ್ಚ ನಿರ್ಣಾಯಕ ಘಟಕವಾದ ಜಿ.ಎಸ್.ಟಿ.ಮಂಡಳಿ ಕೈಗೊಂಡ ಮಹತ್ವದ ನಿರ್ಣಯಗಳನ್ನು ಮಂಡಿಸಿದರು.  ಪ್ರಾರಂಭದಲ್ಲಿ ರೋಟರಿ ಅಧ್ಯಕ್ಷ ಜಿ.ಜೆ.ನಾಯ್ಕ ಸ್ವಾಗತಿಸಿದರು. ಸಿ.ಎ. ಜಿ.ಎಸ್.ಕಾಮತ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಕಾರ್ಯದರ್ಶಿ ಎನ್.ಆರ್.ಗಜು ವಂದಿಸಿದರು. ನಿರೀಕ್ಷಕರಾದ ಗಿರಿಧರ ಕುಮಾರ, ಇಂದ್ರಜೀತ್ ಲಾಲ್, ರೋಟೇರಿಯನ್‍ರಾದ ವಸಂತ ರಾವ್, ವಸಂತ ಶಾನಭಾಗ, ಸುಧೀರ ರೇವಣಕರ, ಗಣೇಶ ಎಂ.ಕಾಮತ, ಚೇತನ ಶೇಟ್, ಯೋಗೀಶ್ ಕಾಮತ, ತೆರಿಗೆ ಸಲಹೆಗಾರ ಜಿ.ಎಸ್.ಹೆಗಡೆ, ಸಾಹಿತಿ ಪುಟ್ಟು ಕುಲಕರ್ಣಿ, ಕಾಮತ್ ಹೌಸ್‍ನ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.