ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ.

ಯಲ್ಲಾಪುರ: ಕಾಣೆಯಾಗಿದ್ದ ವ್ಯಕ್ತಿಯೊಬ್ಬ ಶುಕ್ರವಾರ ಪಟ್ಟಣದ ಜೋಡುಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತ ವ್ಯಕ್ತಿಯನ್ನು ನೂತನನಗರ ಜಡ್ಡಿಯ ಜಮಾಲ್ ಸಾಬ್ ಅಮೀರಸಾಬ ಬೇಪಾರಿ ಎಂದು ಗುರುತಿಸಲಾಗಿದೆ. ಸಾಲ ಹೆಚ್ಚಾದ ಕಾರಣಕ್ಕಾಗಿ ಕುಡಿಯುವ ಚಟ ರೂಢಿಸಿಕೊಂಡಿದ್ದ ಈತ, ಬೇರೆ ಬೇರೆ ರೋಗಗಳಿಂದ ಬಳಲುತ್ತಿದ್ದ. ಎಷ್ಟೇ ಔಷಧೋಪಚಾರ ಮಾಡಿದರೂ ವಾಸಿಯಾಗದೇ ಇರುವುದರಿಂದ ನೊಂದು ಗುರುವಾರ ರಾತ್ರಿ ಮನೆಯಿಂದ ಹೊರಹೋಗಿದ್ದು, ನಿನ್ನೆ ಜೋಡುಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಶವವನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಹೊನ್ನಾವರ ತಾಲೂಕಿನಲ್ಲಿ ಕೊರೋನಾ ಏರಿಕೆ..!

ಕೋಟೆಮನೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ತೆಂಗಿನ ಮರ ಮುರಿದು ಬಿದ್ದು ಹಾನಿ

ಯಲ್ಲಾಪುರ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆ ಹಲವೆಡೆ ಅವಾಂತರ ಸೃಷ್ಟಿಸಿದೆ. ಮಳೆ- ಗಾಳಿಯ ಪರಿಣಾಮ ಉಮ್ಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಮನೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ತೆಂಗಿನ ಮರ ಮುರಿದು ಬಿದ್ದು ಹಾನಿಯಾಗಿದೆ. ಸುಮಾರು 300 ವರ್ಷಗಳ ಇತಿಹಾಸ ಇರುವ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದ ಹೆಂಚು ಹಾಗೂ ಮೇಲ್ಛಾವಣಿಗೆ ಹಾನಿ ಉಂಟಾಗಿದ್ದು, ಗೋಡೆಯೂ ಒಡೆದಿದೆ. ಸ್ಥಳಕ್ಕೆ ಗ್ರಾ.ಪಂ. ಸದಸ್ಯ ಗ.ರಾ. ಭಟ್ಟ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹಾನಿ ಪರಿಸೀಲಿಸಿದ್ದಾರೆ. ಗ್ರಾಮಸ್ಥರೇ ಶ್ರಮದಾನದ ಮೂಲಕ ದೇವಸ್ಥಾನದ ಮೇಲ್ಛಾವಣಿಯನ್ನು ಸರಿಪಡಿಸಿದರು.

RELATED ARTICLES  ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿಯಲ್ಲಿಯಲ್ಲಿ ಮಕ್ಕಳಿಗೆ ಅಡುಗೆ ಸ್ಪರ್ಧೆ