ಶಿರಸಿ: ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಹೇಳಿದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಒಂದೆಡೆ ಕೊರೋನಾ ಕಾರಣದಿಂದಾಗಿ ಜನತೆ ಕಂಗಾಲಾಗಿದ್ದು, ಇದೀಗ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುತ್ತಿದ್ದಾರೆ ಈ ನಡುವೆಯೇ ಪೆಟ್ರೋಲ್ ಡೀಸೆಲ್ ಬೆಲೆ ಒಂದೇ ಸಮನೆ ಏರುತ್ತಿದೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಶಿರಸಿ ನಗರದ ಪೆಟ್ರೋಲ್ ಬಂಕ್‌ಗಳಲ್ಲಿ ಈವರೆಗಿನ ಎಲ್ಲ ದಾಖಲೆಗಳನ್ನು ಮೀರಿ ಶನಿವಾರ ಲೀಟರ್ ಡೀಸೆಲ್ ದರ 100.12ಕ್ಕೆ ಏರಿಕೆಯಾಗಿರುವುದಾಗಿ ವರದಿಯಾಗಿದೆ. ಇಂದು ಒಂದೇ ದಿನಕ್ಕೆ ಅದು 37 ಪೈಸೆಯಷ್ಟು ಹೆಚ್ಚಳವಾಗಿದೆ. ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದ್ದು, ಶುಕ್ರವಾರ ಪ್ರತಿ ಲೀಟರ್ ದರ 97.35 ಪೈಸೆ ಇತ್ತು. ಡೀಸೆಲ್ ದರ ಏರಿಕೆಯಾಗಿರುವದು ಸರಕು ವಾಹನಗಳ ಮಾಲೀಕರಿಗೆ ಚಿಂತೆ ತಂದಿದೆ. ಪೆಟ್ರೋಲ್ ದರ ಕೂಡ 109.71ಕ್ಕೆ ಏರಿಕೆಯಾಗಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ 30 ಪೈಸೆಯಷ್ಟು ಹೆಚ್ಚಳವಾಗಿದೆ. ಪ್ರತಿದಿನ ನಗರದಲ್ಲಿ ಪೆಟ್ರೋಲ್, ಡೀಸೆಲ್ ದರ ಸರಾಸರಿ ಮೂವತ್ತು ಪೈಸೆ ಹೆಚ್ಚಳವಾಗುತ್ತಿದೆ.
ಮಂಗಳೂರಿನ ರಿಂದ ಶಿರಸಿಗೆ ಮಂಗಳೂರಿನಿಂದ ಪೆಟ್ರೋಲ್, ಡೀಸೆಲ್ ಪೂರೈಕೆ ಆಗುತ್ತಿದೆ. ಸಾಗಾಣಿಕೆ ವೆಚ್ಚ ಹೆಚ್ಚಳವಾಗುವ ಕಾರಣ ದರ ಉಳಿದ ಕಡೆಗಿಂತ ಹೆಚ್ಚಿದೆ’ ಎಂದು ಪೆಟ್ರೋಲ್ ಬಂಕ್ ಮಾಲಕರು ಮಾಹಿತಿ ನೀಡಿದ್ದಾರೆ. ಆದರೆ ಈ ಹೆಚ್ಚಳ ಸರಕು ವಾಹನಗಳ ಮಾಲೀಕರಿಗೆ ತಲೆನೋವಾಗಿ ಪರಿಣಮಿಸುತ್ತಿದೆ.