ಹೊನ್ನಾವರ : ತಾಲೂಕಿನ ಗುಣವಂತೆ ಗ್ರಾಮದ ಕೊಲ್ಕಿಯ ಕುಮಾರಿ ಶ್ವೇತಾ ರಾಮ ಗೌಡ ಇವರು ಸಲ್ಲಿಸಿರುವ ಕನ್ನಡ ವಿಭಾಗದ ಸಂಶೋಧನಾ ಪತ್ರಿಕೆ(ರಿಸರ್ಚ್ ಪೇಪರ್) ಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಬಂಗಾರದ ಪದಕ ಪಡೆಯುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ.

ಶ್ವೇತಾ ರಾಮ ಗೌಡ ಇವರ ಯಕ್ಷಗಾನ ರಂಗಕರ್ಮಿ ಕೆರಮನೆ ಶಂಭು ಹೆಗಡೆಯವರ ಬಗ್ಗೆ ಮಂಡಿಸಿದ್ದ ಎಂ.ಎ. ಕನ್ನಡ ವಿಭಾಗದ ಸಂಶೋಧನಾ ಪತ್ರಿಕೆ(ರಿಸರ್ಚ್ ಪೇಪರ್) ಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರಿಂದ ಬಂಗಾರದ ಪದಕ ಲಭಿಸಿದೆ.

RELATED ARTICLES  ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಮೊದಲ ಪಟ್ಟಿಯಲ್ಲೇ ತಮಗೆ ಲಭಿಸಿದ್ದು ಖುಷಿ ತಂದಿದೆ:ರೂಪಾಲಿ ನಾಯ್ಕ

ಹಳ್ಳಿಯಲ್ಲಿ ಹುಟ್ಟಿ ಬೆಳೆದು ಶತತ ಪರಿಶ್ರಮ ಮತ್ತು ಓದುವಿಕೆಯಿಂದ ಅಪೃತಿಮ ಸಾಧನೆಗೈದ ಕುಮಾರಿ ಶ್ವೇತಾ ಅವರ ಸಾಧನೆಗೆ ಅವರ ಕುಟುಂಬದವರು ಹಾಗೂ ಊರ ನಾಗರಿಕರು ಸಂತಸ ವ್ಯಕ್ತಪಡಿಸಿದ್ದು ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ. ಇವಳ ಸಾಧನೆ ಮುಂದಿನವರಿಗೂ ಆದರ್ಶವಾಗಲಿ ಮತ್ತು ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ತಾಲೂಕಾ ಒಕ್ಕಲಿಗರ ಸಂಘ ಹೊನ್ನಾವರದ ಸದಸ್ಯರು ಶುಭ ಹಾರೈಸಿದ್ದಾರೆ.

RELATED ARTICLES  ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ದಿನಕರ ಶೆಟ್ಟಿ: ಅಭಿಮಾನಿಗಳಲ್ಲಿ‌ ಸಂತಸ