ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವರಾದ ಶ್ರೀ ಬಿ.ಸಿ.ನಾಗೇಶರವರು ಕುಮಟಾ ತಾಲೂಕಿನ ಹೊಲನಗದ್ದೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿ ನೂತನವಾಗಿ ನಿರ್ಮಾಣವಾದ ಕಂಪ್ಯೂಟರ್ ಕೊಠಡಿ, ಸುಸಜ್ಜಿತ ವಾಚನಾಲಯ, ವಿಜ್ಞಾನ ಪ್ರಯೋಗಾಲಯ, ಇಂಗ್ಲೀಷ್ ಮಾಧ್ಯಮ ತರಗತಿ, ನವೀಕೃತ ಕೊಠಡಿಗಳು ಹಾಗೂ ಶಾಲಾ ವರಾಂಡವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಿ ಬೋಧನಾ ಮತ್ತು ಕಲಿಕಾ ಪ್ರಕ್ರಿಯೆಯ ಬಗ್ಗೆ ಚರ್ಚಿಸಿದರು.

ಪೋಷಣಾ ಅಭಿಯಾನ ಮಾಸದ ಸಂಕೇತವಾಗಿ ರೂಪಿಸಿದ್ದ ದೀಪ ಬೆಳಗಿಸಿ ಇಂಗ್ಲೀಷ್ ಮಾಧ್ಯಮ ತರಗತಿಗೆ ವಿದ್ಯುಕ್ತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರ ಹಾಗೂ ಎಸ್.ಡಿ.ಎಮ್.ಸಿ. ವತಿಯಿಂದ ಹಾಗೂ ಗ್ರಾಮ ಪಂಚಾಯತ್ ಹೊಲನಗದ್ದೆ ವಾರ್ಡ್ ಸದಸ್ಯರ ವತಿಯಿಂದ ಸಚಿವರನ್ನು ಹಾಗೂ ಶಾಸಕರಾದ ದಿನಕರ ಕೆ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಶಿಕ್ಷಕರು ಸಾರ್ವಜನಿಕರೊಂದಿಗೆ ಬೆರೆತ ಸಚಿವರ ಸರಳ ನಡೆ ಗಮನಸೆಳೆಯಿತು. ಮುಖ್ಯಾಧ್ಯಾಪಕ ರವೀಂದ್ರ ಭಟ್ಟ ಸೂರಿಯವರು ಸಚಿವರು ಮತ್ತು ಶಾಸಕರಿಗೆ ಶಾಲೆಯಲ್ಲಿ ದಾನಿಗಳ ಸಹಾಯದಿಂದ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿವರಿಸಿದರು.

RELATED ARTICLES  ಭಟ್ಕಳ: ಜಿ.ಎಸ್.ಬಿ ವಾರ್ಷಿಕೋತ್ಸವ ೨೦೨೩

ಸರ್ಕಾರಿ ಶಾಲೆಯನ್ನು ಅತ್ಯುತ್ತಮವಾಗಿ ರೂಪಿಸಿದ್ದೀರಿ, ಇಲ್ಲಿನ ಕಲಿಕಾ ವಾತಾವರಣ ಉತ್ತಮವಾಗಿದೆ ಎಂದು ಸಚಿವರು ಪ್ರಶಂಸಿಸಿದರು. ಶಾಲೆಯ ಎಲ್ಲಾ ಕಾರ್ಯಗಳಲ್ಲಿ ಸಹಕರಿಸುತ್ತಿರುವ ಗಣಪತಿ ಮುಕ್ರಿಯವರನ್ನು ಮುಖ್ಯಾಧ್ಯಾಪಕರು ಪರಿಚಯಿಸಿದಾಗ ಸಚಿವರು ಅವರನ್ನು ಅಭಿನಂದಿಸಿದ್ದು ಗಮನಸೆಳೆಯಿತು. ಈ ಕುರಿತು ನೆಲ್ಲೀಕೇರಿ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪಿಸಿದ ಶಿಕ್ಷಣ ಸಚಿವರು ” ಆ ಶಾಲೆಯಲ್ಲಿ ಎಂತಹ ಉತ್ತಮ ವಾತಾವರಣವಿದೆಯೆಂದರೆ ಅಲ್ಲಿಂದ ಹೊರಡಲು ಮನಸ್ಸು ಬರಲಿಲ್ಲ ” ಎಂದರು. ಮುಖ್ಯಾಧ್ಯಾಪಕ ರವೀಂದ್ರ ಭಟ್ಟ ಸೂರಿ ಹಾಗೂ ಎಸ್ ಡಿ ಎಮ್ ಸಿ ಅಧ್ಯಕ್ಷ ಚಂದ್ರಹಾಸ ನಾಯ್ಕ ಸಚಿವರು ಶಾಸಕರನ್ನು ಸ್ವಾಗತಿಸಿದರು. ಉಪಾಧ್ಯಕ್ಷೆ ಶಾಂತಿ ಮುಕ್ರಿ ಹಾಗೂ ಸದಸ್ಯರು, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಾದೇವಿ ಮುಕ್ರಿ, ಸದಸ್ಯರಾದ ಮಹಂತೇಶ ಹರಿಕಂತ್ರ, ದೀಪಾ ಹಿಣಿ, ಅನುರಾಧಾ ಭಟ್ಟ, ಎಮ್.ಎಮ್.ಹೆಗಡೆ ಹಾಗೂ ಊರ ನಾಗರಿಕರು ಹಾಜರಿದ್ದರು. ಉಪನಿರ್ದೇಶಕರಾದ ಹರೀಶ ಗಾಂವಕರ್, ಬಿ.ಇ.ಓ.ರಾಜೇಂದ್ರ ಭಟ್ಟ, ಸಮನ್ವಯಾಧಿಕಾರಿ ರೇಖಾ ನಾಯ್ಕ,ಬಿ.ಆರ್.ಪಿ.ವಿನೋದ ನಾಯಕ, ಸಿ.ಆರ್.ಪಿ.ಪ್ರದೀಪ ನಾಯಕ, ವಿಷ್ಣು ಮಡಿವಾಳ, ತಾಲೂಕ ಪಂಚಾಯತ ಮಾಜಿ ಸದಸ್ಯರಾದ ಜಗನ್ನಾಥ ನಾಯ್ಕ ಉಪಸ್ಥಿತರಿದ್ದರು. ಸಹಶಿಕ್ಷಕರಾದ ವೀಣಾ ನಾಯ್ಕ, ಮಂಗಲಾ ನಾಯ್ಕ, ಶ್ಯಾಮಲಾ ಎಮ್ ಪಟಗಾರ, ಶ್ಯಾಮಲಾ ಬಿ. ಪಟಗಾರ, ದೀಪಾ ನಾಯ್ಕ ಸಹಕರಿಸಿದರು.

RELATED ARTICLES  ದಮ, ದಾನ, ದಯೆ ಬದುಕಿನ ಸಾರ್ಥಕತೆಗೆ ಮೂಲ: ರಾಘವೇಶ್ವರ ಶ್ರೀ